ಪತ್ನಿ ಸಾನಿಯಾ ಮಿರ್ಜಾ ಬಯಕೆ ಪೂರೈಸಿದ ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್

ದುಬೈ, ಸೋಮವಾರ, 17 ಸೆಪ್ಟಂಬರ್ 2018 (08:58 IST)

ದುಬೈ: ಗರ್ಭಿಣಿಯಾಗಿರುವುದರಿಂದ ಟೆನಿಸ್ ಅಂಕಣದಿಂದ ದೂರವಿರುವ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚೆಗೆ ತಮ್ಮ ಪತಿ ಶೊಯೇಬ್ ಮಲಿಕ್ ರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಟ್ವೀಟ್ ಮಾಡಿದ್ದು ಗೊತ್ತಿರಬಹುದು.
 
ಆ ಟ್ವೀಟ್ ಸಂದೇಶದಲ್ಲಿ ಸಾನಿಯಾ ಬೇಗ ಬನ್ನಿ. ಬರುವಾಗ ನಿಮ್ಮ ಗಡ್ಡ ಇರಬಾರದು ಎಂದು ತಾಕೀತು ಮಾಡಿದ್ದರು. ಎಷ್ಟಾದರೂ ಗರ್ಭಿಣಿ ಪತ್ನಿಯ ಬಯಕೆಯಲ್ಲವೇ? ಶೊಯೇಬ್ ಅದನ್ನು ಪೂರ್ತಿ ಮಾಡಿದ್ದಾರೆ.
 
ದುಬೈನಲ್ಲಿ ಏಷ್ಯಾ ಕಪ್ ಕ್ರಿಕೆಟ್ ಆಡಲು ಪಾಕ್ ಕ್ರಿಕೆಟ್ ತಂಡದೊಂದಿಗಿರುವ ಶೊಯೇಬ್ ಮಲಿಕ್ ಇನ್ ಸ್ಟಾಗ್ರಾಂ ಮೂಲಕ ತಮ್ಮ ಕುರುಚಲು ಗಡ್ಡ ನೀಟ್ ಆಗಿ ಶೇವ್ ಮಾಡಿ ಪತ್ನಿ ಸಾನಿಯಾಗಾಗಿ ವಿಡಿಯೋ ಮಾಡಿ ಅಲ್ಲಿಂದಲೇ ಫ್ಲೈಯಿಂಗ್ ಕಿಸ್ ಮಾಡಿ ಕಣ್ಣು ಮಿಟುಕಿಸಿದ್ದಾರೆ! ಜತೆಗೆ ‘ಬೇಗಮ್ ನೀನು ಹೇಳಿದ್ದು ಮಾಡಿದ್ದೀನಿ ನೋಡು. ಈ ಲುಕ್ ನಿನಗಾಗಿ’ ಎಂದು ಸಂದೇಶ ಬರೆದಿದ್ದಾರೆ. ಎಷ್ಟು ರೊಮ್ಯಾಂಟಿಕ್ ಕಪಲ್ ಅಲ್ವಾ?!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮನೆಗೆ ಬಂದ ಪತ್ನಿ ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿ ಒಲವಿನಿಂದ ಸ್ವಾಗತಿಸಿದ್ದು ಹೀಗೆ!

ಮುಂಬೈ: ಇಂಗ್ಲೆಂಡ್ ಪ್ರವಾಸ ಮುಗಿಸಿ ಬಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಮನೆಗೆ ಬಂದ ಮಡದಿ ...

news

ಟೀಂ ಇಂಡಿಯಾ ಪಾಳಯಕ್ಕೆ ಬಂದ ಸಾನಿಯಾ ಮಿರ್ಜಾ ಪತಿ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್

ದುಬೈ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಆಡಲು ದುಬೈನಲ್ಲಿ ಬೀಡು ಬಿಟ್ಟಿರುವ ಟೀಂ ಇಂಡಿಯಾ ಕ್ರಿಕೆಟಿಗರ ನೆಟ್ ...

news

ಪಾಕಿಸ್ತಾನವೇ ನಮ್ಮ ಗುರಿ ಎಂದ ರೋಹಿತ್ ಶರ್ಮಾ

ದುಬೈ: ಏಷ್ಯಾ ಕಪ್ ನಲ್ಲಿ ಭಾರತದ ಅಭಿಯಾನ ದುರ್ಬಲ ಹಾಂಗ್ ಕಾಂಗ್ ವಿರುದ್ಧ ಸೆಪ್ಟೆಂಬರ್ 18 ರಿಂದ ...

news

ವಿರಾಟ್ ಕೊಹ್ಲಿಯ ಅನುಪಸ್ಥಿತಿಯ ಲಾಭ ಪಡೆಯುತ್ತಾರಾ ರೋಹಿತ್ ಶರ್ಮಾ?!

ದುಬೈ: ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಸರಣಿ ಸೋತು ಅಭಿಮಾನಿಗಳು, ಮಾಜಿಗಳ ಕೈಯಲ್ಲಿ ...