ಪತ್ನಿ ಸಾನಿಯಾ ಜತೆ ಕಾಲ ಕಳೆಯಲು ಕ್ರಿಕೆಟ್ ಗೆ ಚಕ್ಕರ್ ಹೊಡೆದ ಶೊಯೇಬ್ ಮಲಿಕ್

ದುಬೈ, ಬುಧವಾರ, 14 ನವೆಂಬರ್ 2018 (08:49 IST)

ದುಬೈ: ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮವಿತ್ತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ಮಿಸ್ ಮಾಡಿಕೊಳ್ಳುವುದಾಗಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಲೇ ಇರುತ್ತಾರೆ.
 
ಹೀಗಾಗಿ ಇದೀಗ ಪತ್ನಿ ಮತ್ತು ಈಗಷ್ಟೇ ಜಗತ್ತಿಗೆ ಬಂದಿರುವ ತಮ್ಮ ಮುದ್ದು ಮಗ ಇಝಾನ್ ಜತೆ ಕಾಲ ಕಳೆಯಲು ಶೊಯೇಬ್ ಮುಂಬರುವ ಐ10 ಕ್ರಿಕೆಟ್ ಲೀಗ್ ನಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ.
 
ಈ ಬಗ್ಗೆ ಟ್ವೀಟ್ ಮಾಡಿರುವ ಶೊಯೇಬ್ ‘ನನ್ನ ಕುಟುಂಬದ ಜತೆ ಕಾಲ ಕಳೆಯಲು ಈ ಬಾರಿ ನಾನು ಐ10 ಲೀಗ್ ನ ಪಂಜಾಬ್ ಲೆಜೆಂಡ್ಸ್ ತಂಡದಲ್ಲಿ ಆಡುತ್ತಿಲ್ಲ.  ಇದೊಂದು ಕಠಿಣ ನಿರ್ಧಾರ (ಅದರಲ್ಲೂ ನನ್ನ ಪತ್ನಿಯೇ ಆಡಲು ಬೆಂಬಲಿಸುತ್ತಿರುವಾಗ). ಆದರೆ ನಾನು ನನ್ನ ಪತ್ನಿ ಮತ್ತು ಪುತ್ರನೊಂದಿಗೆ ಕಾಲ ಕಳೆಯಲು ಬಯಸುತ್ತೇನೆ. ನೀವೆಲ್ಲಾ ಅರ್ಥ ಮಾಡಿಕೊಳ್ಳುತ್ತೀರಿ ಅಂದುಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ನವಂಬರ್ 21 ರಿಂದ ಡಿಸೆಂಬರ್ 2 ರವರೆಗೆ ಶಾರ್ಜಾದಲ್ಲಿ 8 ತಂಡಗಳ ಐ10 ಲೀಗ್ ಕ್ರಿಕೆಟ್ ನಡೆಯಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಣಜಿ ಟ್ರೋಫಿ ಕ್ರಿಕೆಟ್: ಕುಸಿದ ಅಗ್ರರು, ಕರ್ನಾಟಕಕ್ಕೆ ನಿಶ್ಚಲ್ ಆಸರೆ

ನಾಗ್ಪುರ: ಹಾಲಿ ಚಾಂಪಿಯನ್ ವಿದರ್ಭ ಎದುರಿನ ರಣಜಿ ಟ್ರೋಫಿ ಲೀಗ್ ಪಂದ್ಯದಲ್ಲಿ ಕರ್ನಾಟಕದ ದ್ವಿತೀಯ ...

news

ಟೆಸ್ಟ್ ಆಡಲು ಟಿ20 ಕೈ ಬಿಡ್ತಾರಾ ರೋಹಿತ್ ಶರ್ಮಾ?!

ಮುಂಬೈ: ಅಪರೂಪಕ್ಕೆ ಟೆಸ್ಟ್ ಆಡಲು ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಳ್ಳಲು ಕ್ರಿಕೆಟಿಗ ರೋಹಿತ್ ...

news

ಆಸ್ಟ್ರೇಲಿಯಾ ಸರಣಿಗೆ ಮೊದಲು ಮರೆಯಾಯಿತು ಟೀಂ ಇಂಡಿಯಾದ ದೊಡ್ಡ ಚಿಂತೆ!

ಮುಂಬೈ: ಮಹತ್ವದ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಅದಕ್ಕೆ ...

news

ಟೀಕೆ ಮಾಡೋರಿಗೆಲ್ಲಾ ಡೋಂಟ್ ಕೇರ್ ಎಂದ ಶಿಖರ್ ಧವನ್

ನವದೆಹಲಿ: ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ತಾವು ಫಾರ್ಮ್ ಕಳೆದುಕೊಂಡು ಹೆಣಗಾಡುತ್ತಿದ್ದಾಗ ಟೀಕೆ ...