ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಇಷ್ಟು ದಿನ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದ ವಿನಯ್ ಗೌಡ ಇದ್ದಕ್ಕಿದ್ದಂತೆ ತಣ್ಣಗಾಗಲು ನಿರ್ಧರಿಸಿದ್ದಾರೆ.ವಿನಯ್ ಗೌಡ ಈ ಸೀಸನ್ ನಲ್ಲಿ ಹಲವಾರು ಬಾರಿ ಅಗ್ರೆಸಿವ್ ವರ್ತನೆಗಳಿಂದಲೇ ವಿವಾದಕ್ಕೀಡಾಗಿದ್ದರು. ಮನೆಯವರೂ ಅವರ ಮೇಲೆ ಸಾಕಷ್ಟು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದೂ ಇದೆ.ಆದರೆ ವೀಕ್ಷಕರಿಗೂ ವಿನಯ್ ವರ್ತನೆ ಅಸಮಾಧಾನ ತಂದಿತ್ತು. ಕಿಚ್ಚ ಸುದೀಪ್ ಒಮ್ಮೆಯಾದರೂ ಅವರ ವರ್ತನೆಯನ್ನು ಪ್ರಶ್ನಿಸಬೇಕು ಎಂದು ಅಭಿಪ್ರಾಯಪಟ್ಟಿದ್ದೂ ಇದೆ. ಇದೀಗ ಮನೆಗೆ ಈ