ಇಂದಿನಿಂದ ಶುರು ಬಿಗ್ ಬಾಸ್ 8 ಸೆಕೆಂಡ್ ಇನಿಂಗ್ಸ್

ಬೆಂಗಳೂರು| Krishnaveni K| Last Modified ಬುಧವಾರ, 23 ಜೂನ್ 2021 (10:12 IST)
ಬೆಂಗಳೂರು: ಕೊರೋನಾದಿಂದಾಗಿ ಅರ್ಧಕ್ಕೇ ನಿಂತಿದ್ದ ಬಿಗ್ ಬಾಸ್ ಸೀಸನ್ 8 ಇಂದಿನಿಂದ ಮತ್ತೆ ಶುರುವಾಗುತ್ತಿದೆ.
 > ಇಂದು ಸಂಜೆ 6 ಗಂಟೆಯಿಂದ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಎರಡನೇ ಇನಿಂಗ್ಸ್ ನ ಪ್ರಸಾರ ಶುರುವಾಗಲಿದೆ. ಅಂದು ಮನೆಯಲ್ಲಿ ಉಳಿದುಕೊಂಡಿದ್ದ 12 ಸದಸ್ಯರೇ ಮತ್ತೆ ಮನೆಯೊಳಗೆ ಪ್ರವೇಶ ಮಾಡಲಿದ್ದಾರೆ.>   ಈ ಬಾರಿ ಶೋ ಎಷ್ಟು ದಿನಗಳವರೆಗೆ ನಡೆಯಲಿದೆ. ಫೈನಲ್ಸ್ ಯಾವಾಗ ನಡೆಯುತ್ತದೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಆದರೆ ಲಾಕ್ ಡೌನ್ ಬಳಿಕ ಮತ್ತೆ ಬಿಗ್ ಬಾಸ್ ಮನರಂಜನೆ ಶುರುವಾಗಿರುವುದು ವೀಕ್ಷಕರಿಗೆ ಖುಷಿ ತಂದಿದೆ.ಇದರಲ್ಲಿ ಇನ್ನಷ್ಟು ಓದಿ :