ವೀಕ್ಷಕರ ಪ್ರಕಾರ ಬಿಗ್ ಬಾಸ್ 8 ವಿನ್ನರ್ ಇವರೇ

ಬೆಂಗಳೂರು| Krishnaveni K| Last Modified ಮಂಗಳವಾರ, 11 ಮೇ 2021 (09:06 IST)
ಬೆಂಗಳೂರು: ಕೊರೋನಾದಿಂದಾಗಿ ಬಿಗ್ ಬಾಸ್ ರಿಯಾಲಿಟಿ ಶೋ ಅರ್ಧಕ್ಕೇ ನಿಂತಿರಬಹುದು. ಆದರೆ 70 ದಿನಗಳ ಕಾಲದ ಆಟದಲ್ಲಿ ವೀಕ್ಷಕರು ತಮ್ಮ ಮೆಚ್ಚಿನ ಸ್ಪರ್ಧಿ ಯಾರು ಎಂದು ತೀರ್ಮಾನ ಮಾಡಿದ್ದಾರೆ.  
> ಬಿಗ್ ಬಾಸ್ ರದ್ದುಗೊಂಡ ಸುದ್ದಿ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಅರ್ಧಕ್ಕೇ ನಿಂತರೂ ಈ ಬಾರಿ ತಮ್ಮ ಪ್ರಕಾರ ಇವರೇ ವಿನ್ನರ್ ಎಂದು ಕೆಲವು ಸ್ಪರ್ಧಿಗಳ ಹೆಸರು ಬಹಿರಂಗಪಡಿಸಿದ್ದಾರೆ.>   ವೀಕ್ಷಕರು ಹೆಚ್ಚು ವೋಟ್ ಮಾಡಿರುವುದು ಅರವಿಂದ್, ಮಂಜು ಪಾವಗಡ ಮತ್ತು ವೈಷ್ಣವಿಗೆ. ಈ ಮೂವರಲ್ಲಿ ಒಬ್ಬರು ಬಿಗ್ ಬಾಶ್ ವಿನ್ ಆಗಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಅದರಂತೆ ವಿವಿಧ ಮೆಮೆಗಳ ಮೂಲಕ ಅರವಿಂದ್ ಗೆಲ್ಲಬೇಕಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು ಈ ಬಾರಿಯ ವೈಷ್ಣವಿಯೇ ವಿನ್ ಆಗುತ್ತಿದ್ದರು ಎಂದಿದ್ದಾರೆ. ಆದರೆ ಶುಭಾ, ಪ್ರಶಾಂತ್, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್ ಬಗ್ಗೆ ಜನ ಅಷ್ಟೊಂದು ಒಲವು ತೋರಿಸಿಲ್ಲ.ಇದರಲ್ಲಿ ಇನ್ನಷ್ಟು ಓದಿ :