ಹೈದರಾಬಾದ್ ನಲ್ಲಿ ಬೀಡುಬಿಟ್ಟ ಕನ್ನಡ ಧಾರವಾಹಿಗಳು

ಬೆಂಗಳೂರು| Krishnaveni K| Last Modified ಮಂಗಳವಾರ, 1 ಜೂನ್ 2021 (09:15 IST)
ಬೆಂಗಳೂರು: ಸದ್ಯಕ್ಕೆ ಕರ್ನಾಟಕದಲ್ಲಿ ಧಾರವಾಹಿ ಚಿತ್ರೀಕರಣಕ್ಕೆ ನಿರ್ಬಂಧವಿದೆ. ಹಾಗಿದ್ದರೂ ಮನರಂಜನೆಗೆ ಕೊರತೆಯಾಗದಂತೆ ಕಿರುತೆರೆ ವಾಹಿನಿಗಳು ತಯಾರಿ ನಡೆಸಿವೆ.
 > ಕನ್ನಡದ ಎಲ್ಲಾ ವಾಹಿನಿಗಳ ಧಾರವಾಹಿ ತಂಡಗಳಿಗೂ ಈಗ ಹೈದರಾಬಾದ್ ಶೂಟಿಂಗ್ ನ ಹಾಟ್ ಸ್ಪಾಟ್ ಆಗಿದೆ. ರಾಮೋಜಿ ರಾವ್ ಫಿಲಂ ಸಿಟಿ ಸೇರಿದಂತೆ ಹೈದರಾಬಾದ್ ನ ಪ್ರಮುಖ ತಾಣಗಳಲ್ಲಿ ಶೂಟಿಂಗ್ ನಡೆಸುತ್ತಿವೆ.>   ಈ ವಾರದಿಂದ ಮತ್ತೆ ಹೊಸ ಎಪಿಸೋಡ್ ಗಳ ಮೂಲಕ ಎಲ್ಲಾ ವಾಹಿನಿಗಳಲ್ಲಿ ಧಾರವಾಹಿಗಳು ಪ್ರಸಾರವಾಗುತ್ತಿವೆ. ಇದಕ್ಕಾಗಿ ತಮ್ಮ ತಂಡ ಕಟ್ಟಿಕೊಂಡು ಎಲ್ಲಾ ಧಾರವಾಹಿ ತಂಡಗಳೂ ಹೈದರಾಬಾದ್ ನಲ್ಲಿ ಬೀಡುಬಿಟ್ಟಿವೆ. ಇಲ್ಲಿ ಶೂಟಿಂಗ್ ಗೆ ಅನುಮತಿ ಸಿಗುವವರೆಗೂ ಈ ಪರಿಸ್ಥಿತಿ ಮುಂದುವರಿಯಲಿದೆ.ಇದರಲ್ಲಿ ಇನ್ನಷ್ಟು ಓದಿ :