ಬೆಂಗಳೂರು: ಲಾಕ್ ಡೌನ್ ಆದ ಬಳಿಕ ಧಾರವಾಹಿಗಳ ಹೊಸ ಎಪಿಸೋಡ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ದಿನಕ್ಕೊಂದು ಧಾರವಾಹಿ ಇದ್ದಕ್ಕಿದ್ದಂತೆ ಸ್ಥಗಿತವಾಗಿರುವ ಶಾಕಿಂಗ್ ಸುದ್ದಿ ಸಿಗುತ್ತಿದೆ. ಅದರಲ್ಲೂ ಉದಯ ವಾಹಿನಿ ಈ ವಿಚಾರದಲ್ಲಿ ಮುಂದಿದೆ. ಈಗಾಗಲೇ ನಾಯಕಿ, ದೇವಯಾನಿ, ಧಾರವಾಹಿಗಳನ್ನು ಸ್ಥಗಿತಗೊಳಿಸಿದ್ದ ಉದಯ ವಾಹಿನಿ ಈಗ ಇತ್ತೀಚೆಗಷ್ಟೇ ಆರಂಭಿಸಿದ್ದ ಅಮ್ನೋರು ಧಾರವಾಹಿಯನ್ನೂ ಸ್ಥಗಿತಗೊಳಿಸುತ್ತಿರುವ ಸುದ್ದಿ ನೀಡಿದೆ.ಲಾಕ್ ಡೌನ್ ನಿಂದಾಗಿ ಕಿರುತೆರೆ ಕೂಡಾ ನಷ್ಟದಲ್ಲಿದೆ. ಹೀಗಾಗಿ ಹಲವು ಧಾರವಾಹಿಗಳನ್ನು ಅನಿವಾರ್ಯವಾಗಿ ಪ್ರಸಾರ ಕೊನೆಗೊಳಿಸಲಾಗುತ್ತಿದೆ. ಈ