Widgets Magazine

ಮತ್ತೆ ಶೂಟಿಂಗ್ ಗೆ ತೆರಳಲಿರುವ ಖುಷಿಯಲ್ಲಿ ಕುಣಿದಾಡಿದ ನಟಿ ಮೇಘಾ ಶೆಟ್ಟಿ

ಬೆಂಗಳೂರು| Krishnaveni K| Last Modified ಗುರುವಾರ, 7 ಮೇ 2020 (09:19 IST)
ಬೆಂಗಳೂರು: ಧಾರವಾಹಿಗಳ ಶೂಟಿಂಗ್ ಗೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದ ಬೆನ್ನಲ್ಲೇ ಕೆಲವು ಕಲಾವಿದರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ.

 
ಕಲಾವಿದರು ಕೆಲಸ ಮಾಡದೇ ಮನೆಯಲ್ಲೇ ಕೂತು ಎರಡು ತಿಂಗಳಾಗುತ್ತಾ ಬಂದಿದೆ. ಇಷ್ಟು ದಿನ ಸಾಮಾಜಿಕ ಜಾಲತಾಣಗಳ ಮೂಲಕ ಜನರೊಂದಿಗೆ ಚ್ಯಾಟ್ ಮಾಡುತ್ತಿದ್ದ ನಟರಿಗೆ ಈಗ ಮತ್ತೆ ಫೀಲ್ಡಿಗೆ ಇಳಿಯುತ್ತಿರುವ ಖುಷಿ.
 
ಶೂಟಿಂಗ್ ಪ್ರಾರಂಭವಾಗುತ್ತಿರುವ ಖುಷಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜೊತೆ ಜೊತೆಯಲಿ ಧಾರವಾಹಿ ನಾಯಕಿ ಮೇಘಾ ಶೆಟ್ಟಿ ಯಾವಾಗ ಆರಂಭವಾಗುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ. ಇನ್ನು, ಕಿರುತೆರೆ ನಟ ಜಗನ್ನಾಥ್ ಚಂದ್ರಶೇಖರ್ ಕೂಡಾ ಮತ್ತೆ ಶೂಟಿಂಗ್ ಆರಂಭವಾಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :