ಜೀ ಕನ್ನಡದಲ್ಲಿ ಆರಂಭವಾಗುತ್ತಿದೆ ಹೊಸ ಗೇಮ್ ಶೋ

ಬೆಂಗಳೂರು| Krishnaveni K| Last Modified ಮಂಗಳವಾರ, 22 ಅಕ್ಟೋಬರ್ 2019 (08:54 IST)
ಬೆಂಗಳೂರು: ವೀಕೆಂಡ್ ನಲ್ಲಿ ಈಗಾಗಲೇ ಹಲವು ರಿಯಾಲಿಟಿ ಶೋ ನಡೆಸುತ್ತಿದೆ. ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಇತ್ಯಾದಿ ರಿಯಾಲಿಟಿ ಶೋ ಜನಪ್ರಿಯವಾಗಿವೆ.

 
ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಒಂದು ಹಂತಕ್ಕೆ ಬಂದು ನಿಂತಿದ್ದು ಅದಾದ ಬಳಿಕ ಮತ್ತೆ ಸರಿಗಮಪ ಶೋ ಶುರುವಾಗಬಹುದು ಎಂದು ನಿರೀಕ್ಷೆಯಲ್ಲಿದ್ದ ವೀಕ್ಷಕರಿಗೆ ವಾಹಿನಿ ಅಚ್ಚರಿಕೊಟ್ಟಿದೆ.
 
ಜೀ ಕನ್ನಡ  ಈಗ ಜೀನ್ಸ್ ಎನ್ನುವ ಹೊಸದೊಂದು ಗೇಮ್ ಶೋ ಆರಂಭಿಸುತ್ತಿದೆ. ಹಲವು ಸಮಯದ ನಂತರ ಜೀ ಕನ್ನಡದಲ್ಲಿ ಗೇಮ್ ಶೋ ಒಂದು ಪ್ರಸಾರವಾಗುತ್ತಿದೆ. ಇದಕ್ಕೆ ಮೊದಲು ಸೃಜನ್ ಲೋಕೇಶ್ ಮಕ್ಕಳ ಗೇಮ್ ಶೋ ಛೋಟಾ ಚಾಂಪಿಯನ್, ಕಾಸ್ ಗೆ ಟಾಸ್ ಎಂಬಿತ್ಯಾದಿ ಶೋ ನಡೆಸಿಕೊಟ್ಟಿದ್ದರು. ಈಗ ಮತ್ತೊಂದು ಶೋ ಕೂಡಾ ಸೃಜನ್ ನೇತೃತ್ವದಲ್ಲಿಯೇ ಬರಲಿದೆಯೇ ಎನ್ನುವುದನ್ನು ವಾಹಿನಿ ಸಸ್ಪೆನ್ಸ್ ಆಗಿಟ್ಟಿದೆ.
ಇದರಲ್ಲಿ ಇನ್ನಷ್ಟು ಓದಿ :