Widgets Magazine

ಕಾಮಿಡಿ ಕಿಲಾಡಿಗಳು ಶೂಟಿಂಗ್ ಗೆ ಗೈರಾದ ರಕ್ಷಿತಾ ಪ್ರೇಮ್! ಕಾರಣವೇನು ಗೊತ್ತಾ?

ಬೆಂಗಳೂರು| Krishnaveni K| Last Modified ಮಂಗಳವಾರ, 17 ಸೆಪ್ಟಂಬರ್ 2019 (09:12 IST)
ಬೆಂಗಳೂರು: ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಸೀಸನ್ 2 ಸಂಚಿಕೆ ಎರಡು ವಾರಗಳನ್ನು ಪೂರೈಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

 
ಯೋಗರಾಜ್ ಭಟ್ ಮತ್ತು ಜಗ್ಗೇಶ್ ಜತೆಗೆ ರಕ್ಷಿತಾ ಪ್ರೇಮ್ ಕೂಡಾ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಆದರೆ ಈ ವಾರದ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ನಟಿ ರಕ್ಷಿತಾ ಪ್ರೇಮ್ ಗೈರಾಗಲಿದ್ದಾರೆ.
 
ಕಾರಣ ರಕ್ಷಿತಾ ಅನಾರೋಗ್ಯದಿಂದ ಬಳಲುತ್ತಿದ್ದು, ಈ ವಾರ ಕಾಮಿಡಿ ಕಿಲಾಡಿಗಳಲ್ಲಿ ನಾನಿರಲ್ಲ ಎಂದು ಹೇಳಿಕೊಂಡಿದ್ದಾರೆ. ಜೀ ಕನ್ನಡದ ಇನ್ನೊಂದು ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗೂ ರಕ್ಷಿತಾ ತೀರ್ಪುಗಾರರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಕಾಮಿಡಿ ಕಿಲಾಡಿಗಳಿಗೆ ಬರಲಾಗುತ್ತಿಲ್ಲ. ಸಾಧ್ಯವಾದರೆ ಡಿಕೆಡಿಯಲ್ಲಿ ಭಾಗವಹಿಸುವೆ ಎಂದು ರಕ್ಷಿತಾ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :