ಸರಿಗಮಪ ಖ್ಯಾತಿಯ ಗಾಯಕ ಸುಬ್ರಹ್ಮಣ್ಯ ಪತ್ನಿ ಕೊರೋನಾದಿಂದ ಸಾವು

ಬೆಂಗಳೂರು| Krishnaveni K| Last Modified ಮಂಗಳವಾರ, 11 ಮೇ 2021 (10:42 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಹಾಡಿನ ರಿಯಾಲಿಟಿ ಶೋನಲ್ಲಿ ಜನಮೆಚ್ಚುಗೆಗೆ ಪಾತ್ರವಾಗಿದ್ದ ಪೊಲೀಸ್ ಅಧಿಕಾರಿ ಸುಬ್ರಹ್ಮಣ್ಯ ಪತ್ನಿ ಜ್ಯೋತಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ.

 
ಜ್ಯೋತಿ ಕಳೆದ ಒಂದು ವಾರದಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆ ಹಿನ್ನಲೆಯಲ್ಲಿ ಆಸ್ಪತ್ರೆಗಾಗಿ ಅಲೆದಾಡಿದ್ದರು. ಆದರೆ ಸೂಕ್ತ ಸಮಯದಲ್ಲಿ ವೆಂಟಿಲೇಟರ್ ಸಿಗದೇ ಮೃತಪಟ್ಟಿದ್ದಾರೆ.
 
ಬೈಯಪ್ಪನಹಳ್ಳಿ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯಾಗಿರುವ ಸುಬ್ರಹ್ಮಣ್ಯ ಅವರು ಹಾಡಿರುವ ಶೋನಲ್ಲಿ ಒಮ್ಮೆ ಜ್ಯೋತಿ ಕೂಡಾ ಭಾಗವಹಿಸಿದ್ದರು. ಅವರಿಗೆ ಒಬ್ಬ ಮಗಳೂ ಇದ್ದಾಳೆ. ಆ ಕಾರ್ಯಕ್ರಮದಲ್ಲಿ ಇವರ ಕುಟುಂಬದ ಬಾಂಧವ್ಯ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದರಲ್ಲಿ ಇನ್ನಷ್ಟು ಓದಿ :