ನಟಿ ಸೌಜನ್ಯ ಮೃತದೇಹ ಇಂದು ಕುಟುಂಬಸ್ಥರಿಗೆ ಹಸ್ತಾಂತರ

ಬೆಂಗಳೂರು| Krishnaveni K| Last Modified ಶುಕ್ರವಾರ, 1 ಅಕ್ಟೋಬರ್ 2021 (09:26 IST)
ಬೆಂಗಳೂರು: ನಿನ್ನೆ ನೇಣಿಗೆ ಶರಣಾಗಿದ್ದ ಕಿರುತೆರೆ ಮರಣೋತ್ತರ ಪರೀಕ್ಷೆ ಬಳಿಕ ಇಂದು ಪೊಲೀಸರು ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಿದ್ದಾರೆ.  
> ಬೆಂಗಳೂರಿನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಜೊತೆಗೆ ಡೆತ್ ನೋಟ್ ಕೂಡಾ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ. ಹಾಗಿದ್ದರೂ ತನಿಖೆ ನಡೆಯುತ್ತಿದೆ.>   ನಗರದ ಆರ್.ಆರ್ ನಗರ ಆಸ್ಪತ್ರೆಯಲ್ಲಿ ಸೌಜನ್ಯ ಮೃತದೇಹವಿರಿಸಲಾಗಿದ್ದು, ಇಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಅದಾದ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುತ್ತದೆ. ಇಂದು ಸಂಜೆ ಕುಶಾಲನಗರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.ಇದರಲ್ಲಿ ಇನ್ನಷ್ಟು ಓದಿ :