ಮತ್ತೆ ತನ್ನ ಜನಪ್ರಿಯ ಶೋ ಆರಂಭಿಸುತ್ತಿರುವ ಉದಯ ವಾಹಿನಿ

ಬೆಂಗಳೂರು| Krishnaveni K| Last Modified ಗುರುವಾರ, 12 ಡಿಸೆಂಬರ್ 2019 (09:03 IST)
ಬೆಂಗಳೂರು: ಕಿರುತೆರೆಯಲ್ಲಿ ರಿಯಾಲಿಟಿ ಶೋಗಳದ್ದೇ ಜಮಾನವಾಗಿರುವಾಗ ತಾನೂ ಕಮ್ಮಿಯಿಲ್ಲವೆಂದು ಉದಯ ಟಿವಿ ಒಂದೊಂದೇ ಶೋ ಹೊರಬಿಡುತ್ತಿದೆ. ಮೊನ್ನೆಯಷ್ಟೇ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ಪುನರಾರಂಭಿಸುವ ಸುದ್ದಿ ಕೊಟ್ಟಿತ್ತು.
 

ಇದೀಗ ಮತ್ತೊಂದು ಜನಪ್ರಿಯ ಶೋ ಪುನರಾರಂಭಿಸುವ ಸುಳಿವು ನೀಡಿದೆ. ಅದುವೇ ತುತ್ತಾ ಮುತ್ತಾ ಶೋ. ನಿರಂಜನ್ ನಿರೂಪಕರಾಗಿ ಒಂದು ಸೀಸನ್ ಮುಗಿಸಿರುವ ತುತ್ತಾ ಮುತ್ತಾ ಗೇಮ್ ಶೋ ಮತ್ತೆ ಆರಂಭವಾಗುತ್ತಿದೆ.
 
ಯಾವಾಗ ಎಂದು ವಾಹಿನಿ ತಿಳಿಸಿಲ್ಲ. ಆದರೆ ಜನಪ್ರಿಯ ನಟ-ನಟಿಯರು ಪಾಲ್ಗೊಳ್ಳುತ್ತಿದ್ದ ಈ ಶೋ ಮರಳಿ ಬರುತ್ತಿರುವುದಾಗಿ ಪ್ರಕಟಿಸಿದೆ.
ಇದರಲ್ಲಿ ಇನ್ನಷ್ಟು ಓದಿ :