ರೈತರ ಧರಣಿ, ಎಲ್ಲೆಲ್ಲಿ ಹೆದ್ದಾರಿ ಬಂದ್?

ಬೆಂಗಳೂರು| Ramya kosira| Last Modified ಶುಕ್ರವಾರ, 26 ನವೆಂಬರ್ 2021 (09:49 IST)ಬೆಂಗಳೂರು : ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯಾದ್ಯಂತ ಹೆದ್ದಾರಿ ತಡೆದು ರೈತ ಸಂಘಟನೆಗಳು ಧರಣಿ ನಡೆಸುತ್ತಿವೆ.
ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಮೈಸೂರು, ರಾಮನಗರ ಹಾಗೂ ಮಂಡ್ಯ, ಹಾವೇರಿ, ಬೆಳಗಾವಿಯಲ್ಲಿ ಹೆದ್ದಾರಿ ತಡೆದು ಅಧಿವೇಶನದಲ್ಲಿ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಲ್ಲೆಲ್ಲಿ ಹೆದ್ದಾರಿ ಬಂದ್?
1. ತುಮಕೂರು ನಿಂದ ಹೊರಟು ಬೆಂಗಳೂರು ಕಡೆ ಬರುವ ಟೋಲ್ ರಸ್ತೆ
2. ಮಂಡ್ಯ, ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ
3. ಚಿಕ್ಕಬಳ್ಳಾಪುರ ಹಳೇ ಡಿಸಿ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ
4. ರಾಮನಗರ ರಾಷ್ಟ್ರೀಯ ಹೆದ್ದಾರಿ
5. ಚಾಮರಾಜನಗರ, ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ
6. ಶಿವಮೊಗ್ಗ ಬಸ್ ಸ್ಟ್ಯಾಂಡ್ ಸರ್ಕಲ್
7. ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 4, ಕ್ಯಾದಿಗೆರೆ ಹತ್ತಿರ
8. ಬಳ್ಳಾರಿ, ಬೆಂಗಳೂರು ಬೈಬಾಸ್ ರಾಷ್ಟ್ರೀಯ ಹೆದ್ದಾರಿ, ನಂದೂರು
9. ದಾವಣಗೆರೆ, ಜಯದೇವ ಸರ್ಕಲ್ ನಿಂದ ಎಸಿ ಕಚೇರಿವರೆಗೆ ಟ್ರಾಕ್ಟರ್ ರ್ಯಾ,ಲಿ
10. ಕೊಡಗು, ಎಲ್ಲಾ ತಾಲೂಕುಗಳಿಂದ ಕೊಡಗಿಗೆ ಬೈಕ್ ರ್ಯಾಹಲಿ
11. ರಾಯಚೂರಿನ ಹೊರಭಾಗದಲ್ಲಿರುವ ಸಾತ್ ಮೈಲ್ ಸಿಂಧನೂರು ನಗರದಲ್ಲಿ ಮುಖ್ಯ ರಸ್ತೆ
12. ವಿಜಯನಗರ, ಸೊಲ್ಲಾಪುರ ಟು ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ-50. ಟಿಬಿ ಡ್ಯಾಂ, ಗಣೇಶ ಗುಡಿ ಹತ್ತಿರ ಹೊಸಪೇಟೆ
13. ವಿಜಯಪುರ ರಾಷ್ಟ್ರೀಯ ಹೆದ್ದಾರಿ 13, ಟೋಲ್
14. ಹಾಸನ, ಧಾರವಾಡ, ಯಾದಗಿರಿ, ಬೆಳಗಾವಿ ಜಿಲ್ಲೆಗಳ ಹೆದ್ದಾರಿಇದರಲ್ಲಿ ಇನ್ನಷ್ಟು ಓದಿ :