ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಾಡಿರುವ ಟಿಡಿಪಿ, ಇದೀಗ ತನ್ನ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ವಿರುದ್ಧವೇ ವಾಗ್ದಾಳಿ ನಡೆಸಿದೆ.ಅವಿಶ್ವಾಸ ಗೊತ್ತುವಳಿ ಕುರಿತ ತನಗೆ ನೀಡಲಾಗಿರುವ ಸಮಯದಲ್ಲಿ ಚರ್ಚೆಗೆ ಮುಂದಾಗಿರುವ ಟಿಡಿಪಿ ಪರ ಸಂಸದ ಜಯದೇವ ಗಲ್ಲಾ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಆಂಧ್ರಪ್ರದೇಶ ವಿಭಜನೆ ಮಾಡಿದ್ದಕ್ಕೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮಗೆ ರಾಜಧಾನಿಯೂ ಇಲ್ಲ, ಆದಾಯವೂ ಇಲ್ಲ. ಆದಾಯ ತೆಲಂಗಾಣಕ್ಕೆ ಸಾಲ ನಮಗೆ ಕೊಡಲಾಗಿದೆ ಎಂದು