ದಕ್ಷಿಣ ಭಾರತದ ಪ್ರಸಿದ್ಧ ನಟಿ ರಂಭಾಗೆ (ಜೂ.5) ಜನ್ಮದಿನದ ಸಂಭ್ರಮ. ಮೇಲಾಗಿ ಮದುವೆಯಾದ ನಂತರದ ಮೊದಲ ಜನ್ಮದಿನ. ಈವರೆಗೆ 38 ವರ್ಷಗಳನ್ನು ಅತ್ಯದ್ಭುತವಾಗಿ ಪೂರೈಸಿ 39ನೇ ವಸಂತಕ್ಕೆ ಕಾಲಿಡುತ್ತಿರುವ ರಂಭಾಗೆ ಈಗ ತನ್ನ ಉಸಿರು ಉಸಿರಲ್ಲೂ ಇಂದ್ರನಿದ್ದಾನಂತೆ. ಅರ್ಥಾತ್ ಗಂಡನಿದ್ದಾನೆ.
ಇತ್ತೀಚೆಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಂಭಾ ಇದೀಗ ಕೆನಡಾದಿಂದ ಚೆನ್ನೈಗೆ ಓಡೋಡಿ ಬಂದಿದ್ದಾರೆ. ಗಂಡ ಇಂದ್ರನ್ ಹುಟ್ಟುಹಬ್ಬಕ್ಕಾಗಿ ಆಕೆಯನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರಂತೆ. ಈ ಬಗ್ಗೆ ಮಾತನಾಡುವಾಗ ರಂಭಾಗೆ ಸಂತಸದಲ್ಲಿ ಕಣ್ತುಂಬುತ್ತದೆ. ಕೆನ್ನೆ ಕೆಂಪಾಗುತ್ತದೆ.