ಸೂಪರ್ ಉಪೇಂದ್ರ... ರಿಯಲ್ ಸ್ಟಾರ್ ಉಪೇಂದ್ರ ಬಹುಮುಖ ಪ್ರತಿಭೆ. ಇತ್ತೀಚಿನವರೆಗೆ ನಿರ್ದೇಶನದಿಂದ ದೂರವೇ ಇದ್ದ ಉಪ್ಪಿ, 'ಸೂಪರ್' ಮೂಲಕ ಹೊಸ ಸಂಚಲನಕ್ಕೆ ಕಾರಣರಾದವರು. ಆ ಚಿತ್ರ ಅಲ್ಪಾವಧಿಯಲ್ಲೇ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ದೋಚಿದೆ. ಸಹಜವಾಗಿಯೇ ಈಗ ಚಿಲ್ಲರೆ ನಿರ್ಮಾಪಕರು ಉಪ್ಪಿ ಹತ್ತಿರ ಹೋಗಲು ಹೆದರುತ್ತಿದ್ದಾರೆ.
'ಸೂಪರ್' ಚಿತ್ರಕ್ಕೂ ಮೊದಲು ಅವರು ರಿಮೇಕ್ ಚಿತ್ರಗಳಲ್ಲೇ ಮುಳುಗಿ ಹೋಗಿದ್ದವರು. ಆಗೆಲ್ಲ ಒಂದು ಕೋಟಿಗೂ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದರು. ಈಗ ಅದು ದುಪ್ಪಟ್ಟಾಗಿದೆ. ಮೂಲಗಳ ಪ್ರಕಾರ ಅವರು, ಸೂಪರ್ ಚಿತ್ರದಲ್ಲಿ ಸಂಭಾವನೆ ಪ್ಲಸ್ ಪರ್ಸೆಂಟೇಜ್ ತೆಗೆದುಕೊಂಡಿದ್ದಾರೆ. ತೆಲುಗಿನಲ್ಲಿಯೂ ಮಾರುಕಟ್ಟೆ ಹೊಂದಿರುವುದರಿಂದ ಡಬ್ಬಿಂಗ್ ಚಿತ್ರದ ಲೆಕ್ಕಾಚಾರವೂ ಅವರ ಸಂಭಾವನೆಯಲ್ಲಿ ಸೇರಿರುತ್ತದೆ.