ಸುದೀಪ್ ಈಗ ಬಹುಭಾಷಾ ನಟ... ಶಿವಮೊಗ್ಗದ ಹುಡುಗ ಕಿಚ್ಚ ಸುದೀಪ್ ಪ್ರಸಕ್ತ ಕನ್ನಡ, ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟ. ಈಗಾಗಲೇ ಐದು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೊಂದು (ಆವಾಹಮ್) ಕೈಯಲ್ಲಿದೆ. ಅತ್ತ ತೆಲುಗಿನಲ್ಲೂ (ಈಗ) ಖಳನಟನಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
ನಿರ್ದೇಶಕರಾಗಿಯೂ ಗಮನ ಸೆಳೆಯುತ್ತಿರುವ ಸುದೀಪ್ ಪ್ರಸಕ್ತ ನಟನೆಗಾಗಿ ಪಡೆಯುವ ಸಂಭಾವನೆ 1.3 ಕೋಟಿ ರೂಪಾಯಿಗಳು. ಹಿಂದಿ ಮತ್ತು ತೆಲುಗುಗಳಲ್ಲಿಯೂ ನಟಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸಂಭಾವನೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.