ಚಾಲೆಂಜಿಂಗ್ ಸ್ಟಾರ್ ಕಡಿಮೆಯಲ್ಲ... ದುಡ್ಡು ಕೊಟ್ರೆ ಚಡ್ಡೀಲಿ ಬೇಕಾದ್ರೆ ನಟಿಸ್ತೇನೆ ಎಂದು ಕೆಲ ವರ್ಷಗಳ ಹಿಂದೆ ದರ್ಶನ್ ಹೇಳಿದ್ದರು. ಅದು, ಅವರು ಕಷ್ಟಪಟ್ಟು ನಟಿಸಿದ 'ನಮ್ಮ ಪ್ರೀತಿಯ ರಾಮು' ಫ್ಲಾಪ್ ಆದ ದಿನಗಳು. 'ಮೆಜೆಸ್ಟಿಕ್' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ಮಿಂಚಿದ್ದು ಹೊಡಿ-ಬಡಿ ಚಿತ್ರಗಳಲ್ಲಿ.
ಅವರ ಒಟ್ಟು ಚಿತ್ರಗಳ ಸಂಖ್ಯೆಯೀಗ 50ರ ಆಸುಪಾಸಿನಲ್ಲಿದೆ. ಅತಿ ಕಡಿಮೆ ಅವಧಿಯಲ್ಲಿ (10 ವರ್ಷ) ಇಷ್ಟೊಂದು ಚಿತ್ರಗಳನ್ನು ಪೂರೈಸಿ, ಯಶಸ್ವಿಯಾಗಿರುವ ಪ್ರಾಣಿಪ್ರಿಯ ದರ್ಶನ್ ಈಗ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ದಲ್ಲಿ ನಟಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಲು ಹೊರಟಿದ್ದಾರೆ. ಇವರು ಚಿತ್ರವೊಂದಕ್ಕೆ 1.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ.