ಗೋಲ್ಡನ್ ಸ್ಟಾರ್ ದರ ಕುಸಿತ... 'ಮುಂಗಾರು ಮಳೆ' ದಿನಾರಾತ್ರಿ ಸುರಿಯುತ್ತಿದ್ದ ಸಂದರ್ಭದಲ್ಲಿ, ಗಣೇಶ್ ಬಿಟ್ಟು ಇನ್ಯಾರಿಗೂ ಉಳಿಗಾಲವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಅದು ನಂತರ ಕೆಲವೇ ಚಿತ್ರಗಳಿಗೆ ಸೀಮಿತವಾಗಿ ಹೋಯಿತು.
ಗಣೇಶ್ ಕೊನೆಯ ಬಾರಿ ಹಿಟ್ ಕಂಡಿರುವುದು ಯೋಗರಾಜ್ ಭಟ್ಟರ 'ಗಾಳಿಪಟ'ದಲ್ಲಿ. ನಂತರ ಬಿಡುಗಡೆಯಾದ ಅವರ ಏಳು ಚಿತ್ರಗಳು ನಿರ್ಮಾಪಕರ ಜೇಬುಗಳಿಗೆ ಕತ್ತರಿ ಹಾಕಿವೆ. ಸಹಜವಾಗಿಯೇ ಅವರ ಸಂಭಾವನೆ ಬಿರುಗಾಳಿಯಂತೆ ಮೇಲೇರುತ್ತಿಲ್ಲ. ಆದರೂ ಈ ಗೋಲ್ಡನ್ ಸ್ಟಾರ್ 1.2 ಕೋಟಿ ರೂಪಾಯಿ ಕಕ್ಕಿಸಿಕೊಳ್ಳುತ್ತಿದ್ದಾರಂತೆ.