ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ... ಕನ್ನಡತಿ ರಮ್ಯಾ ಲೆಕ್ಕಾಚಾರದ ನಟಿ. ಅವರು ಜೊಳ್ಳು ಚಿತ್ರಗಳಲ್ಲಿ ನಟಿಸಿರುವುದು ಕಡಿಮೆ. ಹಾಗಾಗಿಯೇ ಇಂದು ಕೂಡ ಆರಂಭದಲ್ಲಿನ ಬೇಡಿಕೆಯನ್ನೇ ಉಳಿಸಿಕೊಂಡಿದ್ದಾರೆ. ಅದು ಅವರ ಹೆಗ್ಗಳಿಕೆ ಕೂಡ ಹೌದು.
ಸಂಭಾವನೆ ವಿಚಾರಕ್ಕೆ ಬಂದಾಗ ಚೌಕಾಶಿಗೆ 'ನೋ' ಎಂದು ಹೇಳುವ ಕನ್ನಡ ಚಿತ್ರರಂಗದ ಮೊದಲ ನಟಿ ರಮ್ಯಾ. ಸಣ್ಣಪುಟ್ಟ ವಿಚಾರಗಳಿಗೆಲ್ಲ ತಗಾದೆ ತೆಗೆಯುವುದು, ನಾಯಕ ನಟರ ಜತೆ ಗಲಾಟೆ ಮಾಡುವುದು ಅವರಿಗೆ 'ಜಂಭದ ಕೋಳಿ' ಎಂಬ ಬಿರುದನ್ನೂ ಉಚಿತವಾಗಿ ನೀಡಿದೆ. ಇಷ್ಟೆಲ್ಲದರ ಹೊರತಾಗಿಯೂ ಅವರು ಪಡೆಯುವ ಸಂಭಾವನೆ ಬರೇ 30 ಲಕ್ಷ ರೂಪಾಯಿ. ಪರಭಾಷೆಗಳ ವಿಚಾರ ಬಂದಾಗ ಈ ಮೊತ್ತಕ್ಕೆ ಇನ್ನಷ್ಟು ಲಕ್ಷಗಳು ಸೇರಿಕೊಳ್ಳುತ್ತವೆ.