ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೋರಾಟವೇ ಬದುಕಾಗಿಸಿದ ಬೇನಜೀರ್
ಜನನ: ಜೂನ್ 21, 1953- ಮರಣ: ಡಿಸೆಂಬರ್ 27, 2007
PTI
1988ರಲ್ಲಿ, ಚುನಾವಣೆ ನಡೆಯಲಿದೆ ಎಂದು ಘೋಷಿಸಿದ ಮೂರು ತಿಂಗಳೊಳಗೆ, ಜಿಯಾ ಉಲ್ ಹಕ್ ವಿಮಾನ ದುರಂತದಲ್ಲಿ ಸಾವಿಗೀಡಾದರು. ನವೆಂಬರ್ ಚುನಾವಣೆಗಳಲ್ಲಿ ಪಿಪಿಪಿ ಭರ್ಜರಿ ಮತಗಳೊಂದಿಗೆ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾಯಿತು, ತತ್ಪರಿಣಾಮವಾಗಿ ಇಸ್ಲಾಮಿಕ್ ರಾಷ್ಟ್ರದ ಮೊದಲ ಮಹಿಳಾ ಮುಖ್ಯಸ್ಥೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

1988ರ ಡಿಸೆಂಬರ್ ತಿಂಗಳಲ್ಲಿ ಕೇವಲ 35ರ ಪ್ರಾಯದಲ್ಲಿ ಭುಟ್ಟೋ ಪಾಕ್ ಪ್ರಧಾನಿಯಾದರು. ಅದೇ ತಿಂಗಳಲ್ಲಿ ಪಿಪಿಪಿ ಸರಕಾರವು ಇಸ್ಲಾಮಾಬಾದಿನಲ್ಲಿ ಸಾರ್ಕ್ ಸಮಾವೇಶ ಆಯೋಜಿಸಿತು.

ಆದರೆ 1990ರಲ್ಲಿ ಅಧ್ಯಕ್ಷ ಗುಲಾಂ ಇಶಾಕ್ ಖಾನ್ ಆಕೆಯ ಸರಕಾರವನ್ನು ಭ್ರಷ್ಟಾಚಾರ ಮತ್ತು ಅದಕ್ಷತೆಯ ಆರೋಪದಲ್ಲಿ ಉಚ್ಚಾಟಿಸಿದರು. ಅಧ್ಯಕ್ಷ ಮತ್ತು ಉಸ್ತುವಾರಿ ಸರಕಾರದ ಪ್ರಧಾನಿ ಸೇರಿಕೊಂಡು ಆಕೆಯ ವಿರುದ್ಧ ಸರಣಿ ಕೇಸುಗಳನ್ನು ಜಡಿದರು. ಆಕೆಯ ಪತಿ ಆಸಿಫ್ ಅಲಿ ಜರ್ದಾರಿಯನ್ನು ಬಂಧಿಸಿ ಹಲವು ಆರೋಪಗಳನ್ನು ಹೊರಿಸಿ ಎರಡಕ್ಕೂ ಹೆಚ್ಚು ವರ್ಷ ಕಾಲ ಜೈಲಿನಲ್ಲಿರಿಸಲಾಯಿತು.

1990 ನವೆಂಬರ್ ತಿಂಗಳಲ್ಲಿ ನಡೆದ ಚುನಾವಣೆಗಳಲ್ಲಿ ಆಕೆಯ ಪಕ್ಷ ದಯನೀಯ ಸೋಲು ಕಂಡಿತು. ಭುಟ್ಟೋ ಪ್ರತಿಪಕ್ಷ ನಾಯಕಿಯಾದರು. ಆಡಳಿತಾರೂಢ ಪಕ್ಷವನ್ನು ಉಚ್ಚಾಟಿಸುವ ಹಲವು ಪ್ರಯತ್ನಗಳ ಬಳಿಕ ಆಕೆಯನ್ನು 1992ರಲ್ಲಿ ಇಸ್ಲಾಮಾಬಾದಿನಿಂದ ಕರಾಚಿಗೆ ಗಡೀಪಾರು ಮಾಡಲಾಯಿತು. ಇಸ್ಲಾಮಾಬಾದ್ ಪ್ರವೇಶಿಸದಂತೆ ನಿಷೇಧವನ್ನೂ ಹೇರಲಾಯಿತು.

1993ರಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ನವಾಜ್ ಶರೀಫ್ ಸರಕಾರವನ್ನು ಅಧ್ಯಕ್ಷರು ವಜಾಗೊಳಿಸಿ, ಹೊಸ ಚುನಾವಣೆ ನಡೆಸಲಾಯಿತು. ಭುಟ್ಟೋ ಮತ್ತೆ ಪ್ರಧಾನಿಯಾದರು.

ಹಸಿದವರಿಗೆ ಅನ್ನ, ಆರೋಗ್ಯ ಉದ್ಯೋಗ, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಮಾಸಿಕ ಕನಿಷ್ಠ ವೇತನ... ಇತ್ಯಾದಿ ಯೋಜನೆಗಳಿಂದ ಆಕೆ ಜನಪ್ರಿಯತೆ ಕಳಿಸಿದರು. ಆದರೆ ಇಸ್ಲಾಮಿಕ್ ಮೂಲಭೂತವಾದಿಗಳು ಆಕೆಯನ್ನು ಯಾವತ್ತೂ ವಿರೋಧಿಸುತ್ತಿದ್ದರು. ಪಿಪಿಪಿ ಕೂಡ ಎಡಪಂಥೀಯ ಎಂಬ ಶಂಕೆಯಲ್ಲಿ ಅವರು ಅದನ್ನು ದ್ವೇಷಿಸುತ್ತಿದ್ದರು.

ಆಕೆಯ ವಿದೇಶಾಂಗ ನೀತಿಯು ಭುಟ್ಟೋಗೆ ವಿಶ್ವಾದ್ಯಂತ ಹೆಸರು ಗಳಿಸಿಕೊಟ್ಟಿತು. ಆಕೆಯ ಆಳ್ವಿಕೆಯಲ್ಲಿ ಪಾಕಿಸ್ತಾನದ ಇಮೇಜ್ ಬದಲಾಯಿತು. ಆದರೆ ದೇಶದಲ್ಲಿ ಮಾತ್ರ ಭ್ರಷ್ಟಾಚಾರದ ಆರೋಪಗಳಿಂದಾಗಿ ಬೇನಜೀರ್ ಮತ್ತವರ ಪಕ್ಷ ತತ್ತರಿಸಿತು.

1994ರಲ್ಲಿ ಪುನಃ ಬೇನಜೀರ್ ಪ್ರತಿಪಕ್ಷಗಳಿಂದ ತೊಂದರೆ ಆಹ್ವಾನಿಸಿಕೊಂಡರು. ನವಾಜ್ ಶರೀಫ್ ಅವರು ಬೇನಜೀರ್ ವಿರುದ್ಧ ಭಾರಿ ಪ್ರಮಾಣದಲ್ಲಿ ಬಹಿರಂಗ ಪ್ರತಿಭಟನಾ ಸಭೆಗಳನ್ನು ನಡೆಸಿದರು. 1996ರ ಅಂತ್ಯಭಾಗದಲ್ಲಿ ಭುಟ್ಟೋ ಸರಕಾರವನ್ನು ಮತ್ತೆ ವಜಾಗೊಳಿಸಲಾಯಿತು. ಆಕೆಯ ಭ್ರಷ್ಟಾಚಾರಕ್ಕಾಗಿ ಮಾಧ್ಯಮಗಳಿಂದ, ಸಾರ್ವಜನಿಕರಿಂದ ತೀವ್ರ ಪ್ರತಿರೋಧ ಎದುರಾಗಿತ್ತು. 1996ರ ನವೆಂಬರ್ 5ರಂದು ಪಾಕ್ ಅಧ್ಯಕ್ಷ ಫಾರೂಕ್ ಲೆಘಾರಿ ಅವರು ಭುಟ್ಟೋ ವಜಾಗೊಳಿಸಿ, ಅಸೆಂಬ್ಲಿ ವಿಸರ್ಜಿಸಿದರು.

ಭುಟ್ಟೋ ಅವಧಿಯಲ್ಲಿ ಹೂಡಿಕೆ ಇಲಾಖೆ ಸಂಪುಟ ಸಚಿವರಾಗಿದ್ದ ಪತಿ ಜರ್ದಾರಿ ಟೀಕೆಯ ಕೇಂದ್ರ ಬಿಂದುವಾಗಿದ್ದರು. ಸಾಕಷ್ಟು ಲಂಚ ಪಡೆದುಕೊಳ್ಳುತ್ತಿದ್ದರು, ಗುತ್ತಿಗೆಗಳಿಂದ ಸರಕಾರದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದರು, ಹತ್ಯೆ ಮುಂತಾದ ಎಂಬೆಲ್ಲಾ ಆರೋಪಗಳಿದ್ದವು. ಈ ಎಲ್ಲಾ ಆರೋಪಗಳು ರಾಜಕೀಯ ದುರುದ್ದೇಶಪೂರಿತ ಎಂದು ಖಡಾಖಂಡಿತವಾಗಿ ನಿರಾಕರಿಸಿದ ಬೇನಜೀರ್, ಸ್ವಯಂ ಆಗಿ ದೇಶತ್ಯಾಗ ಮಾಡಿದರು.
 << 1 | 2 | 3  >> 
ಮತ್ತಷ್ಟು
ವೆಬ್‌ದುನಿಯಾ ಸಮೀಕ್ಷೆ - 2007
ಮೋದಿ, ಮಾಧ್ಯಮ ಮತ್ತು ರಾಜಕೀಯ
ಬಿಜೆಪಿ ವಿಜಯ : ದಿಲ್ಲಿ ಗದ್ದುಗೆಯಲ್ಲಿ ಪಶ್ಚಾತ್ ಕಂಪನ
ಮೋದಿ ಮೋಡಿಗೆ ಮತ್ತೆ ಅರಳಿದ '' ಕಮಲ''
ನನ್ನ ವೆಬ್‌ದುನಿಯಾ: ನಿಮ್ಮದೇ ಪೋರ್ಟಲ್ ರಚಿಸಿ
ಜಾರಿಯಾಗದ ಗಲ್ಲುಶಿಕ್ಷೆ: ಹುಯಿಲೆಬ್ಬಿಸಿದ ಬಿಜೆಪಿ