ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಹಿನ್ನೋಟ: 2010 ಟಾಪ್ ಟೆನ್ ಹಗರಣ-ವಿವಾದಗಳು (Roundup 2010 | India | Radia | Scam | Nityananda | CWG | Modi | Adarsha | Yaddyurappa)
Bookmark and Share Feedback Print
 
ನೀರಾ ಎಂಬ ರಾಡಿ
PTI
2010ರ ಅತ್ಯಂತ ಪ್ರಖ್ಯಾತ ಧ್ವನಿಯಾಗಿದ್ದು ನೀರಾ ರಾಡಿಯಾ ಎಂಬ ಕಾರ್ಪೊರೇಟ್ ಜಗತ್ತಿನ ಲಾಬಿ ಮತ್ತು ವೈಷ್ಣವಿ ಕಮ್ಯೂನಿಕೇಶನ್ಸ್ ಎಂಬ ಪಿಆರ್ ಸಂಸ್ಥೆಯ ಮಾಲಕಿ. ನೀರಾ ರಾಡಿಯಾ ಮತ್ತು ಪತ್ರಕರ್ತರು, ಉದ್ಯಮಿಗಳು, ಟೆಲಿಕಾಂ ಸಚಿವ ಎ.ರಾಜಾ ಸಹಿತ ರಾಜಕಾರಣಿಗಳು, ಮಂತ್ರಿಗಳ ನಡುವಿನ ಮಾತುಕತೆಯ ಧ್ವನಿಮುದ್ರಿಕೆಗಳು ಬಯಲಾದಾಗ, ಅದನ್ನು ಕೇಳಲು ಜನರು ತಮ್ಮ ಪ್ರೀತಿಯ ಧಾರಾವಾಹಿಗಳನ್ನೆಲ್ಲಾ ಬಿಟ್ಟು ಟಿವಿ ಮುಂದೆ ಕೂತರು. ಪ್ರಮುಖ ಪತ್ರಕರ್ತರಾದ ಬರ್ಖಾ ದತ್, ವೀರ್ ಸಾಂಘ್ವಿ ಮೊದಲಾದವರು, ಯಾವ ರೀತಿ ಸುದ್ದಿ ಮಾಡಲಿ ಎಂಬರ್ಥದ ಪ್ರಶ್ನೆಗಳನ್ನು ಕೇಳಿದ್ದು ಮತ್ತು ರಾಜಾ ನೇಮಕಾತಿಯಲ್ಲಿ ವಹಿಸಿದ ಪಾತ್ರಗಳೆಲ್ಲ ಸುದ್ದಿಯಾದಾಗ, ಮಾಧ್ಯಮಗಳ ಮೇಲೂ ಲಾಬಿಯ ರಾಡಿ ಎರಚಾಡಿತು. ಕೇಂದ್ರ ಸಚಿವ ಸಂಪುಟದಲ್ಲಿ ಯಾವ ಖಾತೆ ಯಾರಿಗೆ ದೊರೆಯಬೇಕು ಎಂಬಿತ್ಯಾದಿಗಳನ್ನೆಲ್ಲಾ ಈ ಲಾಬಿಯೇ ನಿರ್ಧರಿಸುತ್ತದೆ ಎಂಬುದು ಸ್ಪಷ್ಟವಾದಾಗ ಜನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೂ ಅನುಮಾನ ಹುಟ್ಟತೊಡಗಿತು. 5851 ದೂರವಾಣಿ ಸಂಭಾಷಣೆ ತುಣುಕುಗಳನ್ನು ಸಿಬಿಐ ಸಂಗ್ರಹಿಸಿತು. 2ಜಿ ಸ್ಪೆಕ್ಟ್ರಂ ಹಗರಣಕ್ಕೂ ರಾಡಿಯಾಗೂ ಇರುವ ಲಿಂಕ್ ಮೂಲಕ ರಾಜ್ಯದವರಾದ ಸಂಸದ ಅನಂತ್ ಕುಮಾರ್, ಪೇಜಾವರ ಸ್ವಾಮೀಜಿ ಹೆಸರುಗಳೂ ಕೇಳಿಬರತೊಡಗಿದವು. ಅದಕ್ಕೆ ಸ್ಪಷ್ಟನೆಯೂ ದೊರೆಯಿತು.

ಮಣಿ ಶಂಕರ್ ಅಯ್ಯರ್
PTI
ಇವರು ಕೇಂದ್ರದ ಪ್ರಭಾವಿ ರಾಜಕಾರಣಿ. ಹಗರಣಕ್ಕಿಂತಲೂ ಅವರೊಬ್ಬ ವಿಸಲ್ ಬ್ಲೋವರ್ ಆಗಿ ಕೆಲಸ ಮಾಡಿದವರು. ಕಾಮನ್ವೆಲ್ತ್ ಗೇಮ್ಸ್ ಆಯೋಜನೆಯ ವಿರುದ್ಧವೇ ಅಪಸ್ವರ ಎತ್ತಿದ ಅಯ್ಯರ್, ಕಾಮನ್ವೆಲ್ತ್ ಕೂಟವು ಯಶಸ್ವಿಯಾಗದಿದ್ದರೇ ಒಳ್ಳೆಯದು ಎಂದು ಹೇಳಿ ಎಲ್ಲರ ಹುಬ್ಬೇರಿಸಿದರು. ಕಾಮನ್ವೆಲ್ತ್ ಗೇಮ್ಸ್ ಯಶಸ್ವಿಯಾದರೆ, ಅವರು ಏಷ್ಯನ್ ಗೇಮ್ಸ್, ಒಲಿಂಪಿಕ್ಸ್ ಮುಂತಾದವನ್ನೆಲ್ಲಾ ಭಾರತಕ್ಕೆ ತರುತ್ತಾರೆ ಎಂದು ಅವರು ಸಮಜಾಯಿಷಿ ನೀಡಿದ್ದರು. ಇಂತಹಾ ಸರ್ಕಸ್ ಮಾಡಲು ಸಾವಿರಾರು ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಇದನ್ನೆಲ್ಲಾ ಮಕ್ಕಳಿಗೆ ಕ್ರೀಡೆಗಾಗಿ ಮೂಲಭೂತ ಸೌಕರ್ಯ ಒದಗಿಸಲು ವ್ಯಯಿಸಿದರೆ ಒಳ್ಳೆಯದು ಎಂಬ ಸಲಹೆಯನ್ನೂ ನೀಡಿದ್ದರು.

ಕೊಟ್ಟ ಕೊನೆಗೆ ನಮ್ಮ ಆಮ್ ಆದ್ಮೀ ಎಂದು ಕಾಂಗ್ರೆಸ್‌ನಿಂದ ಪ್ರೀತಿಯಿಂದ ಕರೆಯಲ್ಪಡುವ ಜನ ಸಾಮಾನ್ಯ
ಹೌದು, ಇವನು ಕೂಡ ವಿವಾದಾತ್ಮಕ ವ್ಯಕ್ತಿಯೇ. ಕಳೆದ ಎರಡು ವರ್ಷಗಳಿಂದ ಒಂದೇ ಸಮನೆ ಏರುತ್ತಿರುವ ಬೆಲೆಗಳಿಂದ ಕಂಗೆಟ್ಟು ಕುಳಿತಿದ್ದ ಜನ ಸಾಮಾನ್ಯ, ಒಪ್ಪೊತ್ತಿನ ಊಟಕ್ಕೆ ಕಣ್ಣೀರಿಳಿಸುತ್ತಾ ಕೂತಿದ್ದರೆ, ನಡುನಡುವೆ ಪೆಟ್ರೋಲ್ ಬೆಲೆ ಏರಿಕೆ, ವರ್ಷಾಂತ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ತರಕಾರಿ, ಬೇಳೆ, ಸಕ್ಕರೆ ಬೆಲೆಗಳು ಇನ್ನು ಕೈಗೆಟಕುವುದು ಸಾಧ್ಯವೇ ಇಲ್ಲ ಎಂಬಷ್ಟರ ಹಂತಕ್ಕೆ ತಲುಪಿದಾಗ ಕಂಗಾಲಾಗಿದ್ದಾನೆ. ಈರುಳ್ಳಿಯು ಕಣ್ಣೀರುಳ್ಳಿಯಾದಾಗ ಕೇಂದ್ರ ಸರಕಾರ ಕೊನೆಗೂ ಎಚ್ಚೆತ್ತುಕೊಂಡು ಒಂದಿಷ್ಟು ಉಪಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ. ಬೆಲೆ ಇಳಿಯಲು ಇನ್ನೆಷ್ಟು ದಿನ ಬೇಕೋ....
 
ಸಂಬಂಧಿತ ಮಾಹಿತಿ ಹುಡುಕಿ