ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯಾರೀತ 'ಮೋಸ್ಟ್ ವಾಂಟೆಡ್ ಟೆರರಿಸ್ಟ್' ಲಾಡೆನ್... (Osama bin Laden | Barack Obama | al-Qaeda | jihad)
ಹಿಂದಿನದು|ಮುಂದಿನದು
PTI


ಲಾಡೆನ್ ಹುಟ್ಟು
ಸೌದಿ ಅರೇಬಿಯಾದ ಸಿರಿವಂತ ಕುಟುಂಬದಲ್ಲಿ 1957ನೇ ಇಸವಿಯ ಮಾರ್ಚ್ 10ರಂದು ಒಸಾಮಾ ಬಿನ್ ಮೊಹಮ್ಮದ್ ಬಿನ್ ಅವಾದ್ ಲಾಡೆನ್ ಜನಿಸಿದರು. ಅಲ್-ಖೈದಾ ಭಯೋತ್ಪಾದನೆ ಸಂಘಟನೆಯ ಕಮಾಂಡರ್ ಆಗಿರುವ ಲಾಡೆನ್ 2001 ಸೆಪ್ಟೆಂಬರ್ 11ರಂದು ಅಮೆರಿಕಾದ 'ವರ್ಲ್ಡ್ ಟ್ರೇಡ್ ಸೆಂಟರ್‌' ಮೇಲೆ ನಡೆಸಿದ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ತದ ನಂತರ ಈತ ವಿಶ್ವದ ದೊಡ್ಡಣ್ಣನಾದ ಅಮೆರಿಕ ಸೇರಿದಂತೆ ಜಾಗತಿಕವಾಗಿ ಕಂಟಕಪ್ರಾಯನಾಗಿ ಬೆಳೆದದ್ದು ಇದೀಗ ಇತಿಹಾಸ.

ಉಗ್ರಗಾಮಿ ಜಿಹಾದಿ ಸಂಘಟನೆಯಾದ 'ಅಲ್-ಖೈದಾ' ಸ್ಥಾಪಕನಾದ ಲಾಡೆನ್ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಸವಾಲಾಗಿ ಪರಿಣಮಿಸಿದ್ದ. 1998ರಲ್ಲಿ ಅಮೆರಿಕಾ ರಾಯಭಾರಿ ಕಚೇರಿಗೆ ಮೇಲೆ ಬಾಂಬ್ ಸ್ಫೋಟ ನಡೆಸಿದ ನಂತರ ಯುಎಸ್ ಗುಪ್ತಚರ ಇಲಾಖೆ ಎಫ್‌ಬಿಐ (ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್) ಬಿಡುಗಡೆ ಮಾಡಿದ 'ಮೋಸ್ಟ್ ವಾಂಟೆಡ್ ಟೆರರಿಸ್ಟ್' ಅಗ್ರ ಹತ್ತರ ಪಟ್ಟಿಯಲ್ಲಿ ಲಾಡೆನ್ ಹೆಸರು ಸೇರಿಕೊಂಡಿತ್ತು.

ಪಾಕಿಸ್ತಾನ ಬಡುಕಟ್ಟು ಹಾಗೂ ಅಪಘಾನಿಸ್ತಾನದ ಗಡಿರೇಖಾ ಪ್ರದೇಶವನ್ನು ತನ್ನ ಅಡಗುತಾಣವಾಗಿ ಬಳಸಿಕೊಳ್ಳುತ್ತಿದ್ದ ಲಾಡೆನ್ 2001ರಲ್ಲಿ ಅಮೆರಿಕಾ ವಿರುದ್ಧ ಸಂಚು ಆರಂಭಿಸಿದ. ಅಂತೂ 2011 ಮೇ 2ರಂದು ಪಾಕಿಸ್ತಾನದಲ್ಲಿ ಅಮೆರಿಕಾ ಸೇನಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾಗಿರುವುದಾಗಿ ಅಮೆರಿಕಾ ಅಧ್ಯಕ್ಷ ಒಬಾಮಾ ಘೋಷಿಸಿದ್ದಾರೆ.
ಹಿಂದಿನದು|ಮುಂದಿನದು
ಇವನ್ನೂ ಓದಿ