ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯಾರೀತ 'ಮೋಸ್ಟ್ ವಾಂಟೆಡ್ ಟೆರರಿಸ್ಟ್' ಲಾಡೆನ್... (Osama bin Laden | Barack Obama | al-Qaeda | jihad)
PTI


ಲಾಡೆನ್ ಬಾಲ್ಯ ಜೀವನ
ಲಾಡೆನ್ ತಂದೆ ಮೊಹಮ್ಮದ್ ಬಿನ್ ಅವಾದ್ ಬಿನ್ ಲಾಡೆನ್ ಬಹುದೊಡ್ಡ ಉದ್ಯಮಿ. ಲಾಡೆನ್ ಕುಟಂಬಕ್ಕೆ ಅರಬ್ ರಾಯಲ್ ಫ್ಯಾಮಿಲಿ ಜತೆ ನಿಕಟ ಸಂಪರ್ಕವಿತ್ತು. ತಂದೆಯ ಹತ್ತನೇ ಪತ್ನಿ ಹಮಿದಾ ಅಲ್-ಅಟ್ಟಾಸ್ ಅವರಿಗೆ ಜನಿಸಿದ ಏಕೈಕ ಪುತ್ರನಾಗಿದ್ದಾರೆ ಲಾಡೆನ್. ಆದರೆ ಒಸಾಮಾ ಜನನದ ಅಲ್ಪ ಸಮಯದಲ್ಲೇ ತಂದೆ-ತಾಯಿ ಬೇರೆ ಬೇರೆಯಾದರು. ಇದರಿಂದಾಗಿ ತಾಯಿ ಮೊಹಮ್ಮದ್ ಅಲ್-ಅಟ್ಟಾಸ್ ಎಂಬವರ ಜತೆ ಮತ್ತೊಂದು ವಿವಾಹವಾಗಿದ್ದರಲ್ಲದೆ ನಾಲ್ಕು ಮಕ್ಕಳನ್ನು ಹೊಂದಿದ್ದರು.

ವಿದ್ಯಾಭ್ಯಾಸ
1968ರಿಂದ 1976ರ ವರೆಗೆ ಲಾಡೆನ್ ಅಲ್-ತಾಗೆರ್ ಮಾದರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದಿದ್ದ. ಹಾಗೆಯೇ ಕಿಂಗ್ ಅಬ್ದುಲಾಜಿಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ವಾಣಿಜ್ಯ ಆಡಳಿತ ವಿಷಯದಲ್ಲಿ ವ್ಯಾಸಂಗ ಪಡೆದಿದ್ದ. ಕೆಲವು ಮೂಲಗಳ ಪ್ರಕಾರ ಲಾಡೆನ್ ಸಿವಿಲ್ ಎಂಜಿನಿಯರಿಂಗ್ ಅಥವಾ ಪಬ್ಲಿಕ್ ಆಡಳಿತದ ಪದವಿಯನ್ನು ಹೊಂದಿದ್ದ. ಆದರೆ ಮೂರನೇ ವರ್ಷದ ಪದವಿ ಸಂದರ್ಭದಲ್ಲಿ ಯೂನಿವರ್ಸಿಟಿಯಿಂದ ಹೊರ ನಡೆದಿದ್ದ. ಉತ್ತಮ ವ್ಯಾಸಂಗ ಪಡೆದಿದ್ದ ಲಾಡೆನ್ ಕುರಾನ್ ಮತ್ತು ಜಿಹಾದ್ ಬಗ್ಗೆಯೂ ಪ್ರವಚನ ನೀಡುತಿದ್ದ. ಕವಿತೆಗಳನ್ನು ಬರೆಯುವ ಅಭಿರುಚಿಯನ್ನು ಲಾಡೆನ್ ಹೊಂದಿದ್ದ.

ಕುಟುಂಬ
1974ರಲ್ಲಿ 17ನೇ ವಯಸ್ಸಿನಲ್ಲಿ ನಜ್ವಾ ಗಾನೇಮ್‌ರನ್ನು ಲಾಡೆನ್ ವಿವಾಹಿತರಾದರು. ಸಿಎನ್‌ಎನ್ ರಾಷ್ಟ್ರೀಯ ರಕ್ಷಣಾ ವರದಿ ಪ್ರಕಾರ 2002ರ ವರೆಗೆ ನಾಲ್ಕು ವಿವಾಹಗಳನ್ನು ಆಗಿದ್ದ ಲಾಡೆನ್ 25ರಿಂದ 26 ಮಕ್ಕಳನ್ನು ಹೊಂದಿದ್ದಾರೆ. ವಿಮಾನ ಅಪಘಾತವೊಂದರಲ್ಲಿ ಲಾಡೆನ್ ತಂದೆ ಸಾವಿಗೀಡಾಗಿದ್ದರು.
ಇವನ್ನೂ ಓದಿ