ಧರ್ಮ ಮತ್ತು ಸಿದ್ಧಾಂತ ಶರಿಯಾತ್ ಕಾನೂನುನಿಂದ ಮಾತ್ರ ಮುಸ್ಲಿಂ ಜಗತ್ತಿನಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಲಾಡೆನ್ ನಂಬಿಕೊಂಡಿದ್ದರು. ಲಾಡೆನ್ ಅವರು ಕಮ್ಯೂನಿಸ್ಟ್, ಪ್ರಜಾಪ್ರಭುತ್ವ, ಸಮಾಜವಾದ ಮತ್ತು ವಿಚಾರವಾದ ಸಿದ್ಧಾಂತದ ಅಪ್ಪಟ ವಿರೋಧಿಯಾಗಿದ್ದರು. ಅವರ ಪ್ರಕಾರ ಮುಸ್ಲಿಂ ಜಗತ್ತಿನಲ್ಲಿ ಮುಲ್ಲಾ ಒಮರ್ ತಾಲಿಬಾನ್ ಆಳ್ವಿಕೆಯ ಅಪಘಾನಿಸ್ತಾನ ಮಾತ್ರ ಏಕೈಕ ಇಸ್ಲಾಮಿಕ್ ರಾಷ್ಟ್ರವಾಗಿದೆ.
ಇಸ್ಲಾಂ ಮೇಲೆ ನಡೆಯುತ್ತಿರುವ ಅನ್ಯಾಯಗಳನ್ನು ಎದುರಿಸಲು ಹಿಂಸಾಚಾರವೊಂದೇ ಉತ್ತಮ ಮಾರ್ಗ ಎಂದವರು ನಂಬಿಕೊಂಡಿದ್ದರು. ಇದಕ್ಕಾಗಿ ಇಡೀ ಮುಸ್ಲಿಂ ಜನತೆಗೆ ತಮ್ಮ ಭಯೋತ್ಪಾದನೆ ಸಂಘಟನೆ ಅಲ್-ಖೈದಾ ಮೂಲಕ ಜಿಹಾದಿಗಾಗಿ ಕರೆ ನೀಡುತ್ತಿದ್ದರು. ಆ ಮೂಲಕ ಅಮೆರಿಕಾ ವಿರುದ್ಧ ಸಂಚುಗಳನ್ನು ಹೂಡಿದ್ದರು.