ನ್ಯೂಯಾರ್ಕ್ ಹರಾಜಿನಲ್ಲಿ ಗಾಂಧೀಜಿಯವರ ಖಾಸಗಿ ವಸ್ತುಗಳನ್ನು ಖರೀದಿಸಿರುವುದಕ್ಕೂ, ಸರ್ಕಾರಕ್ಕೂ ಯೂವುದೇ ಸಂಬಂಧವಿಲ್ಲ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ. ಖಾಸಗೀ ವಾಹಿನಿಯೊಂದಕ್ಕೆ ಫ್ರಾನ್ಸ್‌ನಿಂದ ಸಂದರ್ಶನ ನೀಡಿರುವ ಮಲ್ಯ, ಈ ಆಘಾತಕಾರಿ ಹೇಳಿಕೆ ನೀಡಿದ್ದಾರೆ." ನಾನು ಸ್ವತಂತ್ರವಾಗಿ ಬಿಡ್ ಮಾಡಿದೆ. ಈ ವಸ್ತುಗಳನ್ನು ರಾಷ್ಟ್ರಕ್ಕೆ ಮರಳಿ ತರುವುದು ನನಗೆ ಬೇಕಿತ್ತು. ನಾನು ಬಿಡ್ ಮಾಡುತ್ತೇನೆ ಎಂಬುದಾಗಿ ಬೇರೆಯಾರಿಗಾದರೂ ಅರಿವಿತ್ತೇ ಎಂಬುದು ತನಗೆ ತಿಳಿದಿಲ್ಲ" ಎಂದು ಯುಬಿ ಸಮೂಹದ ಒಡೆಯ ಹೇಳಿದ್ದಾರೆ." ಬಿಡ್ ಮಾಡಲು ಸರ್ಕಾರದಿಂದ ನನಗಾರೂ ಸಲಹೆ ನೀಡಿಲ್ಲ. ನಮ್ಮ ರಾಷ್ಟ್ರೀಯ ವಸ್ತುವಿನ ಹರಾಜು ತನಗೆ ಭಾವನಾತ್ಮಕ ವಿಚಾರವಾಗಿತ್ತು" ಎಂದವರು ಪ್ರತಿಕ್ರಿಯಿಸಿದ್ದಾರೆ.ವಿಜಯ್ ಮಲ್ಯ ಅವರು ಹರಾಜಿನಲ್ಲಿ ಗಾಂಧೀಜಿಯವರ ವಸ್ತುಗಳನ್ನು ಖರೀದಿಸಿದ ಬಳಿಕ, "ಸರ್ಕಾರವು ಮಲ್ಯರೊಂದಿಗೆ ನಿರಂತರ ಸಂಪರ್ಕದಲ್ಲಿತ್ತು" ಎಂದು ಕೇಂದ್ರ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಹೇಳಿದ್ದರು. ಅಲ್ಲದೆ, ಡಾ| ಮಲ್ಯ ಅವರು ಸರ್ಕಾರದ ಸಂಯೋಗದೊಂದಿಗೆ ಈ ವಸ್ತುಗಳನ್ನು ಭಾರತಕ್ಕೆ ಮರಳುವಂತೆ ಮಾಡಿದ್ದಾರೆ ಎಂದು ಸೋನಿ ಹೇಳಿದ್ದರು.ಸೋನಿ ಏನುಹೇಳಿದ್ದಾರೆಂದು ತಿಳಿದಿಲ್ಲ ಆದರೆ, "ಅಂಬಿಕಾ ಸೋನಿ ಏನು ಹೇಳಿದ್ದಾರೆ ಎಂದು ತನಗೆ ತಿಳಿದಿಲ್ಲ. ಆದರೆ ನಾನು ಸ್ವಇಚ್ಛೆಯಿಂದ ಇವುಗಳ ಖರೀದಿ ಮಾಡಿದ್ದೇನೆ" ಎಂದು ಮಲ್ಯ ಪ್ರತಿಕ್ರಿಯಿಸಿದ್ದಾರೆ.1.8 ದಶಲಕ್ಷ ಡಾಲರ್‌ಗಳಿಗೆ ಮಲ್ಯ ಅವರು ಹರಾಜಿನಲ್ಲಿ ಗಾಂಧೀಜಿಯವರು ಬಳಸುತ್ತಿದ್ದ ಖಾಸಗಿ ವಸ್ತುಗಳನ್ನು ಖರೀದಿಸಿದ್ದರು.ಮಲ್ಯ ಬಿಡ್: ಬೆನ್ನು ತಟ್ಟಿಕೊಳ್ಳುತ್ತಿರುವ ಸರ್ಕಾರಗಾಂಧೀಜಿ ವಸ್ತುಗಳನ್ನು ಖರೀದಿಸಿದ ವಿಜಯ್ ಮಲ್ಯ |