ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಲ್ಯ ಬಿಡ್: ಬೆನ್ನು ತಟ್ಟಿಕೊಳ್ಳುತ್ತಿರುವ ಸರ್ಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಲ್ಯ ಬಿಡ್: ಬೆನ್ನು ತಟ್ಟಿಕೊಳ್ಳುತ್ತಿರುವ ಸರ್ಕಾರ
ND
ಉದ್ಯಮಿ ವಿಜಯ್ ಮಲ್ಯ ಅವರು ಮಹಾತ್ಮಾಗಾಂಧೀಜಿಯವರ ವಸ್ತುಗಳನ್ನು ಹರಾಜಿನಲ್ಲಿ ಪಡೆದುಕೊಂಡಿರುವ ಬಳಿಕ, ಇದೀಗ ಆ ವಸ್ತುಗಳನ್ನು ಭಾರತಕ್ಕೆ ಮರಳಿ ತಂದಿರುವ ಕೀರ್ತಿ ತನ್ನದೆಂದು ಸರ್ಕಾರ ಹೇಳಿದೆ.

ನ್ಯೂಯಾರ್ಕಿನಲ್ಲಿ ಶುಕ್ರವಾರ ಮುಂಜಾವಿನ ವೇಳೆ ನಡೆದ ಹರಾಜಿನಲ್ಲಿ 1.8 ದಶಲಕ್ಷ ಡಾಲರ್‌ಗಳ (9 ಕೋಟಿ ರೂಪಾಯಿ) ಬಿಡ್‌ನಲ್ಲಿ ಮಲ್ಯ ಗಾಂಧೀಜಿಯವರು ಬಳಸಿದ್ದ, ಐತಿಹಾಸಿಕ ಅಮ‌ೂಲ್ಯ ವಸ್ತುಗಳನ್ನು ಖರೀದಿಸಿದ್ದಾರೆ.

ಹರಾಜಿನ ಈ ಖರೀದಿಗಾಗಿ ಸರ್ಕಾರವು ಮಲ್ಯ ಅವರ ನಿರಂತರ ಸಂಪರ್ಕದಲ್ಲಿತ್ತು ಎಂದು ಕೇಂದ್ರ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಹೇಳಿದ್ದಾರೆ.

ಾ| ಮಲ್ಯ ಅವರು ಸರ್ಕಾರದ ಸಂಯೋಗದೊಂದಿಗೆ ಈ ವಸ್ತುಗಳನ್ನು ಭಾರತಕ್ಕೆ ಮರಳುವಂತೆ ಮಾಡಿದ್ದಾರೆ ಎಂದು ಸೋನಿ ತಿಳಿಸಿದ್ದಾರೆ.

ನಾಟಕೀಯ ಬೆಳವಣಿಗೆಗಳ ಬಳಿಕ ನಡೆದ ಹರಾಜಿನಲ್ಲಿ ವಿಜಯ್ ಮಲ್ಯ ಅವರು ಈ ವಸ್ತುಗಳನ್ನು ಖರೀದಿಸಿದ್ದಾರೆ. ಈ ವೇಳೆ ಅವರು 'ರಾಷ್ಟ್ರಕ್ಕಾಗಿ ಬಿಡ್ ಮಾಡಿರುವುದಾಗಿ' ಹೇಳಿದ್ದಾರೆ. ಹರಾಜನ್ನು ತಡೆಯಲು ಸರ್ಕಾರವು ಕೊನೆಯ ಕ್ಷಣದ ಪ್ರಯತ್ನಗಳನ್ನು ಮಾಡಿದ್ದು, ಸಫಲವಾಗದ ಕಾರಣ, ಈ ವಸ್ತುಗಳನ್ನು ಪಡೆಯಲು ಬಿಡ್‌ನಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿತ್ತು.

ಹರಾಜಿಗೆ ಕೆಲವೇ ಕ್ಷಣಗಳಿಗೆ ಮುಂಚಿತವಾಗಿ ವಸ್ತುಗಳ ಮಾಲಕ ಜೇಮ್ಸ್ ಒಟಿಸ್ ಈ ವಸ್ತುಗಳ ಹರಾಜನ್ನು ಹಿಂತೆಗೆದುಕೊಳ್ಳುಲು ಒಪ್ಪಿದರಾದರೂ. ಹರಾಜು ಸಂಸ್ಥೆಯು ಇದಕ್ಕೆ ಒಪ್ಪಲಿಲ್ಲ. ಯಾಕೆಂದರೆ 30 ಬಿಡ್ಡರ್‌ಗಳು ಅದಾಗಲೇ ತಮ್ಮ ಹೆಸರನ್ನು ನೋಂದಾಯಿಸಿದ್ದರು ಮತ್ತು ಕೆಲವರು ಲಿಖಿತ ಬಿಡ್‌ಗಳನ್ನು ಮಾಡಿದ್ದರು.

ಹೆಚ್ಚಿನ ಮಾಹಿತಿಗೆ ಗಾಂಧೀಜಿ ವಸ್ತುಗಳನ್ನು ಖರೀದಿಸಿದ ವಿಜಯ್ ಮಲ್ಯ ಓದಿ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂದಿನ ವಾರ ಲಂಕೆಗೆ ವೈದ್ಯಕೀಯ ತಂಡ
ಆಡ್ವಾಣಿ-ಶೇಖಾವತ್ ಭೇಟಿ, ಊಟ
ಅಂಧರಿಗೆ ವೆಬ್‌ಸೈಟ್
ಅಸ್ಸಾಂನಲ್ಲಿ ಬಿಜೆಪಿ-ಎಜೆಪಿ ಮೈತ್ರಿ
ಗಾಂಧೀಜಿ ವಸ್ತುಗಳು ಭಾರತಕ್ಕೆ ಬರಲಿ: ಪಿಎಂ
'ಪಾಕಿಸ್ತಾನದ ಮೇಲೆ ಹಿಡಿತ ಉಗ್ರರ ಗುರಿ'