ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಯಾಪ್ರತಿಮೆ: 6 ಗಂಟೆಯೊಳಗೆ ಕಾಮಗಾರಿ ನಿಲ್ಸಿ (Supreme Court | Mayawati | Kanshi Ram | Memorial Sthal)
 
ಲಕ್ನೋದಲ್ಲಿ ಉತ್ತರ ಪ್ರದೇಶ ಸರ್ಕಾರ ನಿರ್ಮಾಣ ನಡೆಸುತ್ತಿದ್ದ ಕಾನ್ಶೀರಾಮ್ ಸ್ಮಾರಕ ಸ್ಥಳದ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ ಅರುಗಂಟೆಯೊಳಗಾಗಿ ಎಲ್ಲಾ ಕಾರ್ಮಿಕರನ್ನು ತೆರವುಗೊಳಿಸಬೇಕು ಎಂಬುದಾಗಿ ನಿರ್ದೇಶನ ನೀಡಿದ್ದು, ಇದರಿಂದ ಮುಖ್ಯಮಂತ್ರಿ ಮಾಯಾವತಿಯವರಿಗೆ ಅತಿದೊಡ್ಡ ಹಿನ್ನಡೆಯುಂಟಾಗಿದೆ.

ಲಕ್ನೋದ ವಿವಿಧೆಡೆ ಬಿ.ಆರ್. ಅಂಬೇಡ್ಕರ್ ಹಾಗೂ ಕಾನ್ಶೀರಾಂ ಅವರ ಸ್ಮಾರಕ ಸ್ಥಳಗಳಲ್ಲಿನ ನಿರ್ಮಾಣ ಕಾಮಗಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸಿ ಎಲ್ಲಾ ಕಾರ್ಮಿಕರನ್ನು ತೆರವುಗೊಳಿಸಬೇಕು. ಭದ್ರತಾ ಸಿಬ್ಬಂದಿಗಳನ್ನು ಹೊರತುಪಡಿಸಿ ಅಲ್ಲಿ ಯಾರೂ ಇರಕೂಡದು ಎಂಬ ಕಟ್ಟುನಿಟ್ಟಿನ ಅಪ್ಪಣೆ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಬಿ.ಎನ್. ಅಗರ್ವಾಲ್ ಮತ್ತು ಅಫ್ತಾಬ್ ಆಲಂ ಅವರನ್ನೊಳಗೊಂಡ ನ್ಯಾಯಪೀಠವು ಈ ನಿರ್ದೇಶನ ನೀಡಿದ್ದು, ಇನ್ಮುಂದೆ ಯಾವುದೇ ಕಾಮಗಾರಿ ನಡೆಸುವುದಿಲ್ಲ ಎಂಬುದಾಗಿ ಉತ್ತರಪ್ರದೇಶ ಸರ್ಕಾರ ಮುಚ್ಚಳಿಕೆ ಬರೆದು ಕೊಟ್ಟಿದ್ದರೂ ನ್ಯಾಯಾಲಯ ಸೆಪ್ಟೆಂಬರ್ 8ರಂದು ನೀಡಿರುವ ಆದೇಶವನ್ನು ಉಲ್ಲಂಘಿಸಲು ಕಾರಣವೇನು ಎಂಬುದಾಗಿ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಕಾರಣ ಕೇಳಿ ನೋಟೀಸು ನೀಡಿದೆ.

ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವಂತೆ ಸ್ಮಾರಕ ಸ್ಥಳದಲ್ಲಿ ನಡೆದಿರುವ ಕೆಲಸದ ಸ್ವರೂಪವನ್ನು 'ಸ್ಪಷ್ಟವಾದ' ಮಾತುಗಳಲ್ಲಿ ವಿವರಿಸಬೇಕು ಎಂಬುದಾಗಿ ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಅನ್ವಯ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಅಲ್ಲದೆ, ಈ ನಿರ್ಮಾಣ ಕಾರ್ಯದ ಕುರಿತು ವರದಿ ಮಾಡಿರುವ ಮಾಧ್ಯಮ ಸಂಸ್ಥೆಗಳ ಬಾತ್ಮೀದಾರರು ತಮ್ಮ ವರದಿಗಳಿಗೆ ಆಧಾರವಾಗಿರುವ ಎಲ್ಲಾ ಸಾಮಾಗ್ರಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಸೂಚಿಸಿದೆ.

ಉತ್ತರ ಪ್ರದೇಶ ಸರ್ಕಾರವು ಪದೇಪದೇ ಸುಪ್ರೀಂಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತಿರುವುದರ ಕುರಿತು ನ್ಯಾಯಾಲಯ ತೀವ್ರ ಅಸಮಾಧಾನ ಸೂಚಿಸಿದೆ. ಮಾಧ್ಯಮ ವರದಿಗಳ ಆಧಾರದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶವನ್ನು ಏಕಪಕ್ಷೀಯವಾಗಿ ನೀಡಿದೆ.

ಪೂರಕ ಓದಿಗೆ ಸಾರ್ವಜನಿಕ ಹಣದಲ್ಲಿ ರಾಜಕೀಯ ಬೇಡ: ಮಾಯಾಗೆ ಸುಪ್ರೀಂ ಕ್ಲಿಕ್ ಮಾಡಿ

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ