ಎಫ್‌ಬಿಐ ಬಂಧನಕ್ಕೀಡಾಗಿರುವ ಶಂಕಿತ ಲಷ್ಕರೆ ಉಗ್ರ ಡೇವಿಡ್ ಹೆಡ್ಲಿಯ ಇಮೇಲ್‌ಗಳಲ್ಲಿ ಪ್ರಸ್ತಾಪವಾಗಿರುವ ರಾಹುಲ್, ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಪುತ್ರ ಎಂಬುದಾಗಿ ಗೊತ್ತಾಗಿದೆ ಎಂಬುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ರಾಹುಲ್ ಹೆಡ್ಲಿಯ ಹಿಟ್ ಲಿಸ್ಟ್‌ನಲ್ಲಿ ಇರಲಿಲ್ಲ, ಬದಲಿಗೆ ಆತ ಹೆಡ್ಲಿಯ ಸ್ನೇಹಿತನಾಗಿದ್ದಾನೆ ಎಂಬುದಾಗಿ 'ಮುಂಬೈ ಮಿರರ್' ಪತ್ರಿಕೆಯಲ್ಲಿ ವರದಿಯಾಗಿದೆ.
ಅದಾಗ್ಯೂ, ರಾಹುಲ್‌ನನ್ನು ವಿಚಾರಣೆಗೊಳಪಡಿಸಿರುವ ತನಿಖಾ ಸಂಸ್ಥೆಗಳು ಆತನಿಗೆ ಕ್ಲೀನ್ ಚಿಟ್ ನೀಡಿದ್ದು, ಆತ ತಪ್ಪಿತಸ್ಥನಲ್ಲವೆಂದು ತೋರುತ್ತದೆ ಎಂದು ಹೇಳಿದೆ.
ಮಹೇಶ್ ಭಟ್ ಪುತ್ರ 25ರ ಹರೆಯದ ರಾಹುಲ್ ಫಿಟ್‌ನೆಸ್ ಪ್ರಿಯನಾಗಿದ್ದು, ಈತ ಹೆಡ್ಲಿಯನ್ನು ಜಿಮ್ ಒಂದರಲ್ಲಿ ಭೇಟಿಯಾಗಿದ್ದ. ಬಳಿಕ ಈ ಇಬ್ಬರು ಸ್ನೇಹಿತರಾಗಿದ್ದು, ಬ್ರೀಚ್ ಕ್ಯಾಂಡಿ ಆಸ್ಪತ್ರೆ ಪಕ್ಕದಲ್ಲಿ ಬಾಡಿಗೆ ಫ್ಲಾಟ್ ಒಂದನ್ನು ಗೊತ್ತುಮಾಡಲು ರಾಹುಲ್ ಹೆಡ್ಲಿಗೆ ಸಹಾಯ ಮಾಡಿದ್ದ.
ಹೆಡ್ಲಿಯ ಹಿನ್ನೆಲೆ ಗೊತ್ತಿಲ್ಲದ ರಾಹುಲ್ ಆತನಿಗೆ ತಿಳಿಯದೆ ಸಹಾಯ ಮಾಡಿದ್ದ ಎಂದು ತನಿಖಾ ಸಂಸ್ಥೆಗಳು ಹೇಳಿವೆ.