ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಫ್‌ಬಿಐ ಬಂಧಿತನಿಂದ 'ರಾಹುಲ್' ಹತ್ಯೆ ಸಂಚು (FBI | LeT | India | Rahul)
Feedback Print Bookmark and Share
 
ಇತ್ತೀಚೆಗೆ ಎಫ್‌ಬಿಐ ಬಂಧನಕ್ಕೀಡಾಗಿರುವ ಚಿಕಾಗೋದ ನಿವಾಸಿ ಡೇವಿಡ್ ಕೋಲ್ಮನ್ ಹೆಡ್ಲಿ ಭಾರತದಲ್ಲಿ ಬೃಹತ್ ಉಗ್ರವಾದ ದಾಳಿ ನಡೆಸಲು ಸಂಚು ಹೂಡಿದ್ದ ಅಲ್ಲದೆ 'ರಾಹುಲ್' ಎಂಬಾತನ ಹತ್ಯೆ ಗುರಿ ಹೊಂದಿದ್ದನೆಂಬ ಅಂಶ ಬೆಳಕಿಗೆ ಬಂದಿದೆ.

ಈ ತಿಂಗಳ ಆದಿಯಲ್ಲಿ ಬಂಧನಕ್ಕೀಡಾಗಿದ್ದ 49ರ ಹರೆಯ ಡೇವಿಡ್ ಭಾರತಕ್ಕೆ ಹಲವು ಪ್ರವಾಸಗಳನ್ನು ಮಾಡಿದ್ದ. ಈತ ಭಾರತದಲ್ಲಿ ಎರಡರಿಂದ ನಾಲ್ಕು ವಾರಗಳ ಕಾಲ ತಂಗಲು ಬಯಸಿದ್ದು, ಲಷ್ಕರೆ ಯೋಜನೆಯನ್ನು ಕಾರ್ಯಗತಗೊಳಿಸಲು ಬಯಸಿದ್ದ ಎಂಬುದು ಅಮೆರಿಕ ತನಿಖೆಯಿಂದ ಗೊತ್ತಾಗಿದೆ.

ಎಫ್‌ಬಿಐ ಚಿಕಾಗೋ ನ್ಯಾಯಾಲಯ ಒಂದಕ್ಕೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ, "ಡೇವಿಡ್ ಜುಲೈ 8ರಂದು ಲಷ್ಕರೆಯ ಉನ್ನತ ನಾಯಕನೊಬ್ಬನಿಗೆ ಕಳುಹಿಸಿದ್ದ ಇಮೇಲ್ ಒಂದರಲ್ಲಿ, ನಾವು ಅವಕಾಶ ಸಿಕ್ಕಿದಾಗ ನಮ್ಮ ಕಳೆದಬಾರಿಯ ಸ್ಥಳಕ್ಕೆ ಮತ್ತೊಮ್ಮೆ ಭೇಟಿ ನೀಡಿ ರಾಹುಲ್‌ಗೆ ಹಾಯ್ ಹೇಳಬೇಕು ಎಂದಿದ್ದ" ಎಂಬುದಾಗಿ ಹೇಳಲಾಗಿದೆ.

ರಾಹುಲ್ ಒಬ್ಬ ಪ್ರಮುಖ ಭಾರತೀಯ ಚಿತ್ರನಟನಾಗಿದ್ದಾನೆ ಎಂಬುದಾಗಿ ಡೇವಿಡ್ ತನಿಖೆಯ ವೇಳೆ ಹೇಳಿದ್ದಾನೆ ಎಂದು ಎಫ್‌ಬಿಐ ಹೇಳಿದೆ.

ಇದೇ ವೇಳೆ ರಾಹುಲ್ ಎಂದರೆ ರಾಹುಲ್ ಗಾಂಧಿ ಆಗಿರಬಹುದು ಎಂಬ ಊಹೆಯನ್ನು ನವದೆಹಲಿಯ ಗುಪ್ತಚರ ಮೂಲಗಳು ತಳ್ಳಿಹಾಕಿವೆ. ಅದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿರುತ್ತಿದ್ದರೆ, ಅಮೆರಿಕದ ಭದ್ರತಾ ಏಜೆನ್ಸಿಗಳು ತಕ್ಷಣವೇ ಭಾರತವನ್ನು ಎಚ್ಚರಿಸುತ್ತಿದ್ದವು, ಇಂತಹ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ ಎಂದು ಅವುಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ