ಮುಂಬೈ ದಾಳಿಯ ವೇಳೆ ಜೀವಂತ ಸೆರೆಸಿಕ್ಕಿರುವ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿರುವ ವಕೀಲ ಅಬ್ಬಾಸ್ ಖಾಜ್ಮಿ ನ್ಯಾಯಾಲಯದಲ್ಲಿ ತನ್ನ ಗುರವಾರದ ಹೇಳಿಕೆಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ. ಇದೇವೇಳೆ, ವಿಶೇಷ ನ್ಯಾಯಾಧೀಶ ತಹಲಿಯಾನಿ ಅವರೂ ಸಹ ಖಾಜ್ಮಿ ಒಬ್ಬ ಸುಳ್ಳುಗಾರ ಎಂಬುದಾಗಿ ಮಾಡಿದ್ದ ತನ್ನ ಹೇಳಿಕೆಯನ್ನೂ ಸಹ ಹಿಂತೆಗೆದು ಕೊಂಡಿದ್ದಾರೆ.
"ಇದೊಂದು ಐತಿಹಾಸಿಕ ವಿಚಾರಣೆಯಾಗಿದ್ದು, ನಾನು ಆರೋಪಿಯನ್ನು ಸಮರ್ಥಿಸಿಕೊಳ್ಳಲು ಉತ್ತಮ ಪ್ರಯತ್ನ ಮಾಡಿದ್ದೇನೆ. ನಿನ್ನೆ ನ್ಯಾಯಾಲಯದಲ್ಲಿ ಏನಾಯಿತೋ ಅದು ವಾಗ್ವಾದಲ್ಲಿ ಉಂಟಾಗಿದ್ದು, ಇದಕ್ಕಾಗಿ ಬೇಷರತ್ ಕ್ಷಮೆ ಯಾಚಿಸಲು ನಾನು ಸಿದ್ಧ" ಎಂದು ಅವರು ಹೇಳಿದ್ದಾರೆ.
ವಿಚಾರಣೆಯು ಸಲೀಸಾಗಿ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.