ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಧ್ರ ರಾಜಿನಾಮೆ ಪ್ರಹಸನ; ಶಾಸಕರಿಗೆ ಸೋನಿಯಾ ಅಭಯ (Sonia Gandhi | Telangana | Andhra Pradesh | Congress)
Bookmark and Share Feedback Print
 
ತೆಲಂಗಾಣ ಪ್ರತ್ಯೇಕ ರಾಜ್ಯ ಕುರಿತ ಕೇಂದ್ರದ ನಿರ್ಧಾರವನ್ನು ಪ್ರತಿಭಟಿಸಿ ರಾಜಿನಾಮೆ ಸಲ್ಲಿಸಿರುವ ಆಂಧ್ರಪ್ರದೇಶದ ಕಾಂಗ್ರೆಸ್ ಶಾಸಕರನ್ನು ಸಮಾಧಾನ ಪಡಿಸಿರುವ ಸೋನಿಯಾ ಗಾಂಧಿ, ಎಲ್ಲರ ಆಸಕ್ತಿಗಳನ್ನೂ ಪರಿಗಣಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಆಂಧ್ರ ಕಾಂಗ್ರೆಸ್ ಶಾಸಕರು ಮತ್ತು ಸಂಸದರು ತೆಲಂಗಾಣ ವಿಚಾರಕ್ಕೆ ಸಂಬಂಧಿಸಿದಂತೆ ಭಾವೋದ್ರೇಕಿತ ವರ್ತನೆ ಮತ್ತು ಮುನಿಸು ಮಾಡಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸೋನಿಯಾ, ಶಿಸ್ತನ್ನು ಪಾಲಿಸುವಂತೆ ಕರೆ ನೀಡಿದ್ದಾರೆ.

ಹೈಕಮಾಂಡ್ ಏಕಪಕ್ಷೀಯ ನಿರ್ಧಾರದ ವಿರುದ್ಧ ಪ್ರತಿಭಟನಾರ್ಥವಾಗಿ 32 ಕಾಂಗ್ರೆಸ್ ಶಾಸಕರು ಹಾಗೂ ಒಬ್ಬ ಸಂಸದ ತಮ್ಮ ಜವಾಬ್ದಾರಿಗಳಿಗೆ ರಾಜಿನಾಮೆ ಸಲ್ಲಿಸಿದ ಕ್ಷಿಪ್ರ ಬೆಳವಣಿಗೆಯ ನಂತರ 10ನೇ ಜನಪಥದಲ್ಲಿ ತುರ್ತು ಸಭೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೋನಿಯಾ, ಪ್ರಕರಣವನ್ನು ಶಾಸಕರು ಗಂಭೀರತೆಗೆ ತಳ್ಳಬಾರದೆಂದು ಮನವಿ ಮಾಡಿದರಲ್ಲದೆ, ಎಲ್ಲರ ಆಸಕ್ತಿಗಳನ್ನೂ ರಕ್ಷಿಸಲಾಗುತ್ತದೆ ಎಂಬ ಭರವಸೆ ನೀಡಿದರು.

ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಹಿರಂಗ ಅಸಮಾಧಾನ ಕಂಡು ಬಂದಿರುವುದರಿಂದ ಈ ಸಭೆಯಲ್ಲಿ ಎಷ್ಟು ಮಂದಿ ಸಂಸದರು ಭಾಗವಹಿಸಿದ್ದರು ಎಂಬ ಮಾಹಿತಿಗಳು ಸ್ಪಷ್ಟವಾಗಿಲ್ಲ.

ವಿಜಯವಾಡ ಸಂಸದ ಲಾಗದಪತಿ ರಾಜಗೋಪಾಲ್ ಮೊದಲು ತನ್ನ ರಾಜಿನಾಮೆ ಸಲ್ಲಿಸಿದವರು. ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರನ್ನು ಭೇಟಿಯಾದ ಗೋಪಾಲ್ ತನ್ನ ರಾಜಿನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ನಂತರ ಅವರು ಹೈದರಾಬಾದ್‌ಗೆ ವಿಮಾನದ ಮೂಲಕ ತೆರಳಿದ್ದಾರೆ ಎಂದು ವರದಿಗಳು ಹೇಳಿವೆ. ಇನ್ನೂ ಐವರು ಸಂಸದರು ರಾಜಿನಾಮೆ ನೀಡಿದ್ದಾರೆ ಅಥವಾ ನೀಡಲು ಉತ್ಸುಕರಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.

ತೆಲಂಗಾಣ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಕೇಂದ್ರ ಒಪ್ಪಿಗೆ ಸೂಚಿಸಿರುವುದಕ್ಕೆ ಟಿಡಿಪಿ ಮತ್ತು ಪ್ರಜಾರಾಜ್ಯ ಪಾರ್ಟಿ ಶಾಸಕರು ಕೂಡ ತಮ್ಮ ರಾಜಿನಾಮೆ ಸಲ್ಲಿಸಿದ್ದಾರೆ. ಆಂಧ್ರ ಕರಾವಳಿ ಮತ್ತು ರಾಯಲ್‌ಸೀಮೆ ಪ್ರಾಂತ್ಯದ ಶಾಸಕರು ತಮ್ಮ ರಾಜಿನಾಮೆ ಪತ್ರಗಳನ್ನು ವಿಧಾನಸಭೆ ಸ್ಪೀಕರ್ ಕಿರಣ್ ಕುಮಾರ್ ರೆಡ್ಡಿಯವರಿಗೆ ಸಲ್ಲಿಸಿದ್ದಾರೆ.

ಈ ನಡುವೆ ತೆಲಂಗಾಣ ರಾಷ್ಟ್ರೀಯ ಸಮಿತಿ ಹೋರಾಟದ ನೇತಾರ ಕೆ. ಚಂದ್ರಶೇಖರ ರಾವ್ ಅವರನ್ನು ಗೃಹ ಸಚಿವ ಪಿ. ಚಿದಂಬರಂ ರಾಷ್ಟ್ರ ರಾಜಧಾನಿಗೆ ಆಹ್ವಾನಿಸಿದ್ದಾರೆ.

ಮುಂದಿನ ನಡೆಗಳ ಕುರಿತು ಚರ್ಚೆ ನಡೆಸಲು ಅವರನ್ನು ನಾನು ದೆಹಲಿಗೆ ಆಹ್ವಾನಿಸಿದ್ದೇನೆ ಎಂದು ಚಿದಂಬರಂ ತಿಳಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಗಳಿವು...
ತೆಲಂಗಾಣ: ಆಂಧ್ರ ತಲ್ಲಣ, 60ಕ್ಕೂ ಹೆಚ್ಚು ಶಾಸಕರ ರಾಜೀನಾಮೆ
ಒಮ್ಮತವಿದ್ದರೆ ಮಾತ್ರ ತೆಲಂಗಾಣ: ರೋಸಯ್ಯ
ಸಂಬಂಧಿತ ಮಾಹಿತಿ ಹುಡುಕಿ