ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೆ ಮುಖ್ಯಮಂತ್ರಿಯಾಗಲಿರುವ ಶಿಬು: ಹಕ್ಕು ಮಂಡನೆ (Jharkhand | Govt formation | JMM | BJP | Shibu Soren)
Bookmark and Share Feedback Print
 
ತನ್ನ ಮುಖ್ಯಮಂತ್ರಿತ್ವಕ್ಕೆ ಬಿಜೆಪಿ ಸಮ್ಮತಿಸಿರುವುದರೊಂದಿಗೆ, 81 ಸದಸ್ಯಬಲದ ವಿಧಾನಸಭೆಯಲ್ಲಿ 43 ಸದಸ್ಯರ ಬೆಂಬಲ ಪತ್ರವನ್ನು ಹೊತ್ತ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಜೆಎಂಎಂ ಮುಖ್ಯಸ್ಥ ಶಿಬು ಸೋರೆನ್ ಅವರು ಸರಕಾರ ರಚನೆಗಾಗಿ ಶನಿವಾರ ಹಕ್ಕು ಮಂಡಿಸಿದರು.

ಅಪರಾಹ್ನ 3 ಗಂಟೆಗೆ ರಾಜಭವನದಲ್ಲಿ ರಾಜ್ಯಪಾಲ ಕೆ.ಶಂಕರನಾರಾಯಣ್ ಅವರನ್ನು ಭೇಟಿ ಮಾಡಿ 43 ಸದಸ್ಯರ ಬೆಂಬಲ ಪತ್ರವನ್ನು ಒಪ್ಪಿಸಿ, ಸರಕಾರ ರಚನೆಗೆ ಅನುವು ಮಾಡುವಂತೆ ಕೋರಿದರು.

ಮತ್ತೆ ಒಂದಾದ ಹಳೇ ಶತ್ರುಗಳು ಕ್ಲಿಕ್ ಮಾಡಿ.

ಇತ್ತೀಚೆಗೆ ಮುಕ್ತಾಯವಾದ ವಿಧಾನಸಭೆ ಚುನಾವಣೆಯಲ್ಲಿ ಜೆಎಂಎಂ 18 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಮೂಡಿ ಬಂದಿತ್ತು. ಅದಕ್ಕೆ ಬಿಜೆಪಿ ಮಿತ್ರಕೂಟದ 18 ಹಾಗೂ ಅಖಿಲ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ (ಎಜೆಎಸ್‌ಯು)ದ 6 ಶಾಸಕರ ಬೆಂಬಲ ದೊರೆತಿದೆ.
ಸಂಬಂಧಿತ ಮಾಹಿತಿ ಹುಡುಕಿ