ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೆಕ್ಸ್ ಕಾಂಡ:ರಾಷ್ಟ್ರಪತಿಯಿಂದ ತಿವಾರಿ ರಾಜೀನಾಮೆ ಸ್ವೀಕೃತ (Andhra Pradesh | ND Tiwari | Sex scandal | President | Pratibha Patil)
ಸೆಕ್ಸ್ ಕಾಂಡ:ರಾಷ್ಟ್ರಪತಿಯಿಂದ ತಿವಾರಿ ರಾಜೀನಾಮೆ ಸ್ವೀಕೃತ
ನವದೆಹಲಿ, ಭಾನುವಾರ, 27 ಡಿಸೆಂಬರ್ 2009( 15:23 IST )
ಲೈಂಗಿಕ ಹಗರಣದ ವಿವಾದಕ್ಕೆ ಸಿಲುಕಿರುವ ಆಂಧ್ರಪ್ರದೇಶದ ರಾಜ್ಯಪಾಲ ನಾರಾಯಣ ದತ್ತ ತಿವಾರಿ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಭಾನುವಾರ ಅಂಗೀಕರಿಸಿರುವುದಾಗಿ ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.
ಆ ನಿಟ್ಟಿನಲ್ಲಿ ಚತ್ತೀಸ್‌ಗಢದ ರಾಜ್ಯಪಾಲ ಇಎಸ್‌ಎಲ್ ನರಸಿಂಹ ಅವರಿಗೆ ಹೆಚ್ಚುವರಿಯಾಗಿ ಆಂಧ್ರಪ್ರದೇಶದ ರಾಜ್ಯಪಾಲರ ಕರ್ತವ್ಯ ನಿರ್ವಹಿಸುವಂತೆ ಆದೇಶ ನೀಡಲಾಗಿದೆ. ಲೈಂಗಿಕ ಕರ್ಮಕಾಂಡದ ಆರೋಪದ ಹಿನ್ನೆಲೆಯಲ್ಲಿ ತಮ್ಮ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿರುವ ತಿವಾರಿ ಅವರ ರಾಜೀನಾಮೆಯನ್ನು ರಾಷ್ಟ್ರಪತಿಯವರು ಇಂದು ಸ್ವೀಕರಿಸಿದ್ದಾರೆ.
ಆಂಧ್ರದ ಖಾಸಗಿ ಟಿವಿ ಚಾನೆಲ್‌ವೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ 86ರ ಹರೆಯದ ರಾಜ್ಯಪಾಲ ಎನ್.ಡಿ.ತಿವಾರಿ ಅವರ ಲೈಂಗಿಕ ಕರ್ಮಕಾಂಡದ ವರದಿ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಇದರಿಂದ ರಾಜ್ಯಪಾಲ ತಿವಾರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚಿತ್ತು.
ಈ ಹಿನ್ನೆಲೆಯಲ್ಲಿ ಶನಿವಾರ ರಾಜ್ಯಪಾಲ ತಿವಾರಿ ಅವರು ಅನಾರೋಗ್ಯದ ನಿಮಿತ್ತ ತಾವು ಪದತ್ಯಾಗ ಮಾಡುತ್ತಿರುವುದಾಗಿ ಹೇಳಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದರು.