ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಂಬ್ ಇರಬಹುದೆಂದು ಹೆದರಿದ್ದರಂತೆ ಆ ತಮಿಳು ಸಚಿವರು! (Policeman attacked | minister | Tirunelvelli | Tamil Nadu)
Bookmark and Share Feedback Print
 
ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಪೊಲೀಸ್‌ನನ್ನು ಆಸ್ಪತ್ರೆಗೆ ಸಾಗಿಸುವ ಬದಲು ಕಾರಲ್ಲೇ ಕುಳಿತು ದೂರದಿಂದಲೇ ವೀಕ್ಷಿಸಿ ನಿಷ್ಕರುಣೆ ಮೆರೆದ ತಮಿಳುನಾಡಿನ ಹೃದಯವಿಹೀನ ಸಚಿವದ್ವಯರಿಗೆ ಸ್ಥಳದಲ್ಲಿ ಬಾಂಬ್ ಇದ್ದಿರಬಹುದೆಂಬ ಭೀತಿಯಿತ್ತಂತೆ!

ಸ್ಥಳದಲ್ಲಿ ಹೊಗೆ ತುಂಬಿಕೊಂಡಿತ್ತು. ಆ ಹೊತ್ತಿನಲ್ಲಿ ಅಲ್ಲಿ ಸ್ಫೋಟಗೊಳ್ಳದ ಬಾಂಬ್ ಇರಬಹುದು ಎಂದು ಇತರರು ಹೇಳಿದ ಕಾರಣ ನಾವು ಕಾರಿನಿಂದ ಸ್ವಲ್ಪ ಹೊತ್ತು ಇಳಿದಿರಲಿಲ್ಲ. ಆದರೆ ನಾವೇನೂ ಮಾನವೀಯತೆಯೇ ಇಲ್ಲದ ಕ್ರೂರಿಗಳಲ್ಲ ಎಂದು ಸಚಿವದ್ವಯರು ಸ್ಪಷ್ಟಪಡಿಸಿದ್ದಾರೆ.

ತಿರುನಲ್ವೇಲಿಯಲ್ಲಿ ಗೂಂಡಾಗಳಿಂದ ದಾಳಿಗೊಳಗಾದ ವೆತ್ರಿವೇಲ್ ಒಂದು ಕಾಲನ್ನೇ ಕಳೆದುಕೊಂಡು ರಸ್ತೆಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದ. ಈ ಸಂದರ್ಭದಲ್ಲಿ ಪ್ರಾಣಭಯದಿಂದ ಸಚಿವರು ಕಾರಿನಿಂದ ಹೊರ ಬರದೆ ಅಮಾನವೀಯತೆ ಮೆರೆದಿದ್ದದ್ದು ವೀಡಿಯೋ ಚಿತ್ರೀಕರಣ ಬಹಿರಂಗವಾದಾಗ ರುಜುವಾತಾಗಿತ್ತು.

ಇದರಿಂದ ತೀವ್ರ ಟೀಕೆಗಳನ್ನೆದುರಿಸಿದ ಸಚಿವರಲ್ಲೊಬ್ಬರಾದ (ಆರೋಗ್ಯ ಸಚಿವ) ಎಂ.ಆರ್.ಕೆ. ಪನೀರ್ ಸೆಲ್ವಂ, ತಮಗೆ ಕಾರಿನಿಂದ ಹೊರಗೆ ಬರಲು ತುಂಬಾ ಹೆದರಿಕೆಯಾಗಿತ್ತು; ಆದರೆ ಆಂಬುಲೆನ್ಸ್‌ಗೆ ಕರೆ ಮಾಡುವ ಮೂಲಕ ನನ್ನ ಕೆಲಸವನ್ನು ಮಾಡಿದ್ದೇನೆ ಎಂದಿದ್ದಾರೆ.

ಒದ್ದಾಡುತ್ತಿದ್ದ ಪೊಲೀಸ್‌ಗೆ ನಾನು ಸಹಾಯ ಮಾಡಿಲ್ಲ, ಕಾರಿನಿಂದ ಇಳಿದಿಲ್ಲ ಎನ್ನುವುದೆಲ್ಲ ಸುಳ್ಳು. ನನಗೂ ಹೃದಯವಿದೆ. ಇಂತಹ ಪರಿಸ್ಥಿತಿಯನ್ನು ನೋಡಿದ ಮೇಲೂ ಯಾರಾದರೂ ಹೇಗೆ ಹೊರ ಬರದಿರಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ನಾನು ಕಾರಿನಿಂದ ಇಳಿದು ಮೊದಲು ಮಾಡಿದ ಕೆಲಸವೇ ಆಂಬುಲೆನ್ಸ್‌ಗೆ ಕರೆ ಮಾಡಿದ್ದು. ಅದು ಬರುವುದು ತಡವಾಗುತ್ತದೆ ಎಂಬುದನ್ನು ಅರಿತ ಮೇಲೆ ನಮ್ಮಲ್ಲೇ ಒಂದು ಕಾರಿನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಸ್ಪಷ್ಟಪಡಿಸಿದರು.

ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮತ್ತೊಬ್ಬ ಸಚಿವ ಟಿಪಿಎಂ ಮೊಯಿದಿನ್ ಖಾನ್ ಕೂಡ ಇದೀಗ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ನಾವು ತಕ್ಷಣವೇ ಆಂಬುಲೆನ್ಸ್‌ಗೆ ಕರೆ ಮಾಡಿದ್ದೆವು ಎಂದು ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವರಾಗಿರುವ ಖಾನ್ ತಿಳಿಸಿದ್ದಾರೆ.

ವೆತ್ರೀವೇಲ್ ಮೇಲೆ ಕಚ್ಚಾ ಬಾಂಬುಗಳನ್ನು ಎಸೆಯಲಾಗಿತ್ತು. ಈ ಕಾರಣದಿಂದ ಅವರು ತನ್ನ ಬಲಗಾಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಅಲ್ಲದೆ ತಲೆ ಮತ್ತು ಕತ್ತಿನ ಮೇಲೂ ತೀವ್ರತರ ಗಾಯಗಳಾಗಿದ್ದವು.\

ಸಂಬಂಧ ಪಟ್ಟ ಸುದ್ದಿಯಿದು...
ಕಣ್ಣೆದುರೇ ಪೊಲೀಸ್ ಸಾಯುತ್ತಿದ್ದರೂ ರಕ್ಷಿಸದ ತಮಿಳು ಸಚಿವರು
ಸಂಬಂಧಿತ ಮಾಹಿತಿ ಹುಡುಕಿ