ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೌಡರಿಗೆ 'ಗೆಟ್ ವೆಲ್ ಸೂನ್' ಸಂದೇಶ: ಬಿಜೆಪಿ (Devegowda | NICE | Yaddiyurappa | Derogatory Remark | Bastard)
Bookmark and Share Feedback Print
 
ಕರ್ನಾಟಕ ಮುಖ್ಯಮಂತ್ರಿಯನ್ನು ಬ್ಲಡಿ ಬಾಸ್ಟರ್ಡ್, ಬೋ.. ಮಗ ಎಂದೆಲ್ಲಾ ಜರೆದಿರುವ ಮಾಜಿ ಪ್ರಧಾನಿ, ಮಣ್ಣಿನ ಮಗ ಎಚ್.ಡಿ.ದೇವೇಗೌಡರ ಬಗ್ಗೆ 'ಮುನ್ನಾಭಾಯಿ'ಯ ಗಾಂಧಿಗಿರಿ ಪ್ರದರ್ಶಿಸಲಿರುವ ಬಿಜೆಪಿ, ಅವರಿಗೆ 'ಶೀಘ್ರವೇ ಗುಣಮುಖರಾಗಿ (ಗೆಟ್ ವೆಲ್ ಸೂನ್)' ಸಂದೇಶವನ್ನು ಕಳುಹಿಸಲು ನಿರ್ಧರಿಸಿದೆ.

ಯಡಿಯೂರಪ್ಪ ವಂಚಕ: ಪಟ್ಟುಬಿಡದ ಗೌಡರಿಂದ ವಾಗ್ದಾಳಿ ಮುಂದುವರಿಕೆ ಕ್ಲಿಕ್ ಮಾಡಿ.

ಗೌಡರ ಹೇಳಿಕೆಗಳ ಬಗ್ಗೆ ಬಿಜೆಪಿ ನಿಲುವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಿದ್ದ ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್, 'ನಾನವರಿಗೆ ಗೆಟ್ ವೆಲ್ ಸೂನ್ ಸಂದೇಶ ಕಳುಹಿಸುತ್ತೇನೆ' ಎಂದು ಹೇಳಿದರು.

ಯಾವನ್ರೀ ಸಿಎಂ ಬ್ಲಡೀ ಬಾಸ್ಟರ್ಡ್: ದೇವೇಗೌಡ ಕ್ಲಿಕ್ ಮಾಡಿ.

'ಇಂತಹ ಹೇಳಿಕೆಗಳು ಅವರ ಹತಾಶೆ ಮತ್ತು ರೋಗಗ್ರಸ್ಥ ಮನಸ್ಥಿತಿಯನ್ನು ತೋರಿಸುತ್ತದೆ. ಅವರಿಗೆ ಈಗ ಕೈಯಲ್ಲಿ ಅಧಿಕಾರವೂ ಇಲ್ಲ, ಜನಪ್ರಿಯತೆಯೂ ನಶಿಸಿಹೋಗುತ್ತಿದೆ' ಎಂದು ಜಾವಡೇಕರ್ ನುಡಿದರು.

ಗೌಡರ ವಿರುದ್ಧ ಹೋರಾಟ ಮುಂದುವರಿಸಿದ್ರೆ ಎಚ್ಚರ: ಕುಮಾರ ಕ್ಲಿಕ್ ಮಾಡಿ.
ಸಂಬಂಧಿತ ಮಾಹಿತಿ ಹುಡುಕಿ