ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಟ್ಯಾಕ್ಸಿ ಪರ್ಮಿಟ್‌ಗೆ ಹಿಂದಿ, ಗುಜರಾತಿ ಗೊತ್ತಿದ್ರೂ ಓಕೆ: ಮಹಾರಾಷ್ಟ್ರ (Marathi | Hindi | Gujarati | Mumbai taxi driver)
Bookmark and Share Feedback Print
 
ಮರಾಠಿ ಓದಲು ಮತ್ತು ಬರೆಯಲು ಗೊತ್ತಿದ್ದವರಿಗೆ ಮಾತ್ರ ಮುಂಬೈಯಲ್ಲಿ ಟ್ಯಾಕ್ಸಿ ಪರವಾನಗಿ ನೀಡಲಾಗುತ್ತದೆ ಎಂಬ ನಿಯಮಕ್ಕೆ ಭಾರೀ ಟೀಕೆಗಳು ಬಂದ ಬೆನ್ನಿಗೆ ನಿಲುವು ಬದಲಾಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್, ಹಿಂದಿ ಮತ್ತು ಗುಜರಾತಿ ಭಾಷಿಗರಿಗೂ ಪರ್ಮಿಟ್ ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ.

ಮರಾಠಿ ತಿಳಿದವರು ಮತ್ತು ರಾಜ್ಯದಲ್ಲಿ ಕನಿಷ್ಠ 15 ವರ್ಷ ವಾಸ ಮಾಡಿದವರಿಗೆ ಮಾತ್ರ ಮುಂದೆ ಟ್ಯಾಕ್ಸಿ ಚಾಲನೆ ಪರವಾನಗಿ ನೀಡಲಾಗುತ್ತದೆ ಎಂದು ನಿನ್ನೆ ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಸರಕಾರವು ಹೇಳುವ ಮೂಲಕ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆಯಂತೆ ವರ್ತಿಸಿತ್ತು.

ಪ್ರಸಕ್ತ ಪರವಾನಗಿ ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ, ಅವರು ಯಾವುದೇ ಭಾಷಿಗರಾದರೂ ಅನುಮತಿ ಮುಂದುವರಿಯುತ್ತದೆ ಎಂದು ಇದೇ ಸಂದರ್ಭದಲ್ಲಿ ಸರಕಾರ ಹೇಳಿತ್ತು.

ಸರಕಾರದ ನಿಲುವಿನ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಣ್ಣ ಬದಲಾಯಿಸಿದೆ. ಈ ಬಗ್ಗೆ ಮಾತನಾಡುತ್ತಾ ಮುಖ್ಯಮಂತ್ರಿಯವರು, 1989ರ ಮಹಾರಾಷ್ಟ್ರ ಮೋಟಾರು ವಾಹನ ನಿಯಮಗಳ ಚೌಕಟ್ಟಿನಲ್ಲಿ ಸಂಪುಟ ಈ ನಿರ್ಧಾರಕ್ಕೆ ಬಂದಿದೆ; ನಿಯಮಾವಳಿಗಳ ಪ್ರಕಾರ ಪರವಾನಗಿ ಪಡೆಯುವ ವ್ಯಕ್ತಿ ಕನಿಷ್ಠ 15 ವರ್ಷಗಳ ಕಾಲ ರಾಜ್ಯದಲ್ಲಿ ವಾಸ ಮಾಡಿರುವ ದಾಖಲೆ ಕಡ್ಡಾಯ. ಎರಡನೇ ನಿಯಮದ ಪ್ರಕಾರ ಚಾಲಕನು ಟ್ಯಾಕ್ಸಿ ಗುರುತುಪತ್ರ ಪಡೆಯಬೇಕಾದರೆ ಆತನಿಗೆ ಸ್ಥಳೀಯ ಭಾಷೆಯ ಅರಿವಿರಬೇಕು ಎಂದು ತಿಳಿಸಿದ್ದಾರೆ.

ಸ್ಥಳೀಯ ಭಾಷೆಗಳೆಂದರೆ ಮರಾಠಿ, ಹಿಂದಿ, ಗುಜರಾತಿ ಹೀಗೆ... ಯಾವ ಭಾಷೆಯಾದರೂ ಸಮಸ್ಯೆಯಿಲ್ಲ. ಸ್ಥಳೀಯ ಭಾಷೆಯನ್ನು ತಿಳಿದಿರುವುದು ಅವಶ್ಯಕ. ಈ ಭಾಷೆಗಳಲ್ಲಿ ವ್ಯವಹರಿಸುವುದು ಹೇಗೆಂಬ ಮಾಹಿತಿ ತಿಳಿದಿದ್ದರೆ ಟ್ಯಾಕ್ಸಿ ಚಾಲಕರು ಪರವಾನಗಿ ಪಡೆಯಬಹುದಾಗಿದೆ ಎಂದು ಚೌಹಾನ್ ಸ್ಪಷ್ಟಪಡಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಯಿದು: ಮರಾಠಿ ಬಲ್ಲವರಿಗೆ ಮಾತ್ರ ಮುಂಬೈಯಲ್ಲಿ ಟ್ಯಾಕ್ಸಿ ಪರ್ಮಿಟ್!
ಸಂಬಂಧಿತ ಮಾಹಿತಿ ಹುಡುಕಿ