ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಷ್ಯಾ ಬಾಲಕಿಯ ಅತ್ಯಾಚಾರ; ಇಬ್ಬರೂ ಆರೋಪಿಗಳ ಬಂಧನ (Anil Raghuvanshi | Aman Bharadwaj | Goa Rape case | Russian girl rape)
Bookmark and Share Feedback Print
 
ಪೊಲೀಸರು ಬಿಡುಗಡೆ ಮಾಡಿರುವ ಚಿತ್ರ
PR
ಒಂಬತ್ತರ ಹರೆಯದ ರಷ್ಯಾ ಬಾಲಕಿ ಅತ್ಯಾಚಾರ ಆರೋಪಿಯ ಭಾವಚಿತ್ರವನ್ನು ಗೋವಾ ಪೊಲೀಸ್ ಇಲಾಖೆಯು ಬಿಡುಗಡೆ ಮಾಡಿದ ಬೆನ್ನಿಗೆ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅನಿಲ್ ರಘುವಂಶಿ ಎಂಬ ಆರೋಪಿಯನ್ನು ಗೋವಾದ ಪೆರ್ನೆಮ್ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಗೋವಾ ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿ ಅಮಾನ್ ಭಾರದ್ವಾಜ್‌ನನ್ನು ಕೂಡ ಇಂದೇ ಮುಂಬೈಯ ಚೆಂಬೂರಿನಲ್ಲಿ ಬಂಧಿಸಲಾಗಿದೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ಗೋವಾ ಪೊಲೀಸರ ತಂಡ ಪ್ರಮುಖ ಆರೋಪಿಯನ್ನು ಮುಂಬೈಯಲ್ಲಿ ಬಂಧಿಸಿದ್ದು, ಆತನನ್ನು ರಾಜ್ಯಕ್ಕೆ ಕರೆ ತರಲಾಗುತ್ತದೆ. ಮತ್ತೊಬ್ಬ ಆರೋಪಿ ರಘುವಂಶಿಯನ್ನು ಬೆಂಗಳೂರಿನಿಂದ ಬಂದಿದ್ದ ಬಸ್ಸಿನಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರೂ ಆರೋಪಿಗಳು ಗೋವಾದಲ್ಲಿನ ಔಷಧ ಕಂಪನಿಯೊಂದರ ಉದ್ಯೋಗಿಗಳು. ಇಬ್ಬರನ್ನೂ ನಾವು ಬಂಧಿಸಿದ್ದೇವೆ. ಪ್ರಮುಖ ಆರೋಪಿ ಸಂಜೆಯವರೆಗೆ ಸಿಕ್ಕಿರಲಿಲ್ಲ. ಆತನ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನಾವು ಕಲೆ ಹಾಕಿದ್ದುದರಿಂದ ಬಂಧಿಸುವ ವಿಶ್ವಾಸ ನಮಗಿತ್ತು. ಬಂಧಿತರ ವಿಚಾರಣೆ ನಡೆಸುತ್ತಿದ್ದೇವೆ ಎಂದು ಗೋವಾ ಪೊಲೀಸ್ ಡಿಐಜಿ ರವೀಂದ್ರ ಯಾದವ್ ತಿಳಿಸಿದ್ದಾರೆ.

ಮುಂಬೈ ಕ್ರೈಂ ಬ್ರ್ಯಾಂಚ್‌ಗೆ ಪತ್ರ...
ಗೋವಾ ಪೊಲೀಸರು ಆರೋಪಿಗಳ ಬಂಧನಕ್ಕೆ ಸಹಕರಿಸುವಂತೆ ಮುಂಬೈ ಅಪರಾಧ ದಳಕ್ಕೆ ಪತ್ರ ಬರೆದಿದ್ದರು. ಆರೋಪಿಗಳು ಮುಂಬೈ ಮೂಲಕ ಉತ್ತರ ಪ್ರದೇಶಕ್ಕೆ ಪರಾರಿಯಾಗಲು ಯತ್ನಿಸಬಹುದು ಎಂಬ ಶಂಕೆಯಿಂದ ಮುಂಬೈ ಪೊಲೀಸರ ಸಹಕಾರವನ್ನು ಕೋರಲಾಗಿತ್ತು.

ಗುರುವಾರ ಬೆಳಿಗ್ಗೆ ಗೋವಾ ಪೊಲೀಸರು ಆರೋಪಿಗಳ ಭಾವಚಿತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಇದನ್ನು ಎಲ್ಲಾ ಪೊಲೀಸ್ ಠಾಣೆಗಳು, ವಿಮಾನ ನಿಲ್ದಾಣಗಳು ಹಾಗೂ ಗಡಿ ತಪಾಸಣಾ ಘಟಕಗಳಿಗೆ ರವಾನಿಸಲಾಗಿತ್ತು.

ಅತ್ಯಾಚಾರ ಪೂರ್ವಯೋಜಿತ: ತಾಯಿ
ಒಂಬತ್ತರ ಹರೆಯದ ತನ್ನ ಮಗಳನ್ನು ಅತ್ಯಾಚಾರ ನಡೆಸಿರುವ ಕೃತ್ಯ ಪೂರ್ವ ನಿಯೋಜಿತ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ.

ಗಣರಾಜ್ಯೋತ್ಸವದಂದು ಗೋವಾದಲ್ಲಿನ ಅರಂಬೋಲ್ ಬೀಚಿನಲ್ಲಿ ರಷ್ಯನ್ ಬಾಲಕಿಯನ್ನು ದುಷ್ಕರ್ಮಿಯೊಬ್ಬ ಅತ್ಯಾಚಾರ ನಡೆಸಿದ್ದ. ಮಗುವಿನ ತಾಯಿಯೊಂದಿಗೆ ಲೋಕಾಭಿರಾಮ ಮಾತನಾಡುತ್ತಾ ಒಬ್ಬ ಕಾಲ ಕಳೆದರೆ ಮತ್ತೊಬ್ಬ ಬಾಲಕಿಯೊಂದಿಗೆ ನೀರಾಟವಾಡುತ್ತಾ ಅತ್ಯಾಚಾರ ನಡೆಸಿದ್ದ ಎಂದು ಹುಡುಗಿಯ ತಾಯಿ ಆರೋಪಿಸಿದ್ದಾರೆ.

ನನ್ನ ಗಂಡ ಜನವರಿ 25ರಂದು ಮಾಸ್ಕೋಗೆ ಹೋಗಿದ್ದರು. ಅದರ ನಂತರ ನಾನು ಒಬ್ಬಂಟಿಯಾಗಿರುವುದನ್ನು ಆರೋಪಿಗಳು ಗಮನಿಸಿ ತೀರಾ ನಿಕಟವಾಗಲು ಯತ್ನಿಸಿದ್ದರು. ಆದರೆ ನನಗೆ ಅವರ ವರ್ತನೆಗಳು ಸರಿ ಕಂಡಿರಲಿಲ್ಲ ಎಂದು ವೃತ್ತಿಪರ ವೈದ್ಯೆಯೂ ಆಗಿರುವ ಅತ್ಯಾಚಾರ ಬಲಿಪಶುವಿನ ತಾಯಿ ತಿಳಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಯಿದು: ರೇಪ್ ಕ್ಯಾಪಿಟಲ್‌ನಲ್ಲಿ 9ರ ಬಾಲಕಿಯ ಜತೆ ಯುವಕನ ಚೆಲ್ಲಾಟ
ಸಂಬಂಧಿತ ಮಾಹಿತಿ ಹುಡುಕಿ