ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ಮಗಳು ಕುಡೀತಾಳೆ, ಆದ್ರೆ ಅಷ್ಟಲ್ಲ: ಯೂಸುಫ್ ಸಮರ್ಥನೆ (Drunk driving | Nooriya Haveliwala | breath analyser machine | Yousuf Haveliwala)
Bookmark and Share Feedback Print
 
ನಡುರಾತ್ರಿ ಕಂಠಪೂರ್ತಿ ಕುಡಿದು ಅಪಘಾತ ನಡೆಸಿ ಇಬ್ಬರ ಸಾವಿಗೆ ಕಾರಣಳಾಗಿದ್ದಾಳೆ ಎಂಬ ಆರೋಪದಿಂದ ಕಂಬಿ ಎಣಿಸುತ್ತಿರುವ ನೂರಿಯಾ ಹವೇಲಿವಾಲಾಳ ಹೆತ್ತವರು 'ಮಗಳು ಕುಡಿಯುತ್ತಿದ್ದಳು' ಎಂಬುದನ್ನು ಒಪ್ಪಿಕೊಂಡಿದ್ದರೂ, ವೈದ್ಯಕೀಯ ವರದಿ ಸರಿಯಿಲ್ಲ, ಅಪಘಾತಕ್ಕೆ ಆಕೆ ಕುಡಿದದ್ದೇ ಕಾರಣವಾಗಿರಲಿಕ್ಕಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಯಾವುದೇ ವ್ಯಕ್ತಿ 430 ಎಂಎಲ್‌ಗಿಂತ ಹೆಚ್ಚು ಮದ್ಯ ಸೇವಿಸಿದಲ್ಲಿ ಆತ ಸಂಪೂರ್ಣ ಪ್ರಜ್ಞಾಹೀನನಾಗುತ್ತಾನೆ ಇಲ್ಲವೇ ಅರೆ ಪ್ರಜ್ಞಾವಸ್ಥೆಗೆ ತಲುಪುತ್ತಾನೆ. ಅವರಿಗೆ ನಡೆಯುವುದೂ ಸಾಧ್ಯವಿಲ್ಲ ಎಂದು ಪ್ರಸಕ್ತ ಪೊಲೀಸ್ ಕಸ್ಟಡಿಯಲ್ಲಿರುವ ನೂರಿಯಾ ತಂಡೆ ಯೂಸುಫ್ ಹವೇಲಿವಾಲಾ ಅವರು ಈ ವಾದವನ್ನು ಮಂಡಿಸಿದ್ದಾರೆ.

ನನ್ನ ಮಗಳು ಹೈ-ಹೀಲ್ಡ್ ಚಪ್ಪಲಿ ಹಾಕಿಕೊಂಡಿದ್ದರೂ ನೇರವಾಗಿ ನಡೆಯುತ್ತಿದ್ದಳು. ಹಾಗಾಗಿ ಆಕೆ ಪೊಲೀಸರು ತಿಳಿಸಿದ ವೈದ್ಯಕೀಯ ವರದಿಯಲ್ಲಿದ್ದ 450 ಎಂಎಲ್ ಆಲ್ಕೋಹಾಲ್ ಸೇವಿಸಿರಲು ಸಾಧ್ಯವೇ ಇಲ್ಲ. ಅವರ ಯಂತ್ರವೇ ಸರಿಯಿದ್ದ ಹಾಗಿಲ್ಲ ಎಂದು ಸ್ವತಃ ವೈದ್ಯರಾಗಿರುವ ಯೂಸುಫ್ ಹೇಳುತ್ತಾರೆ.

ಮಗಳು ಆಲ್ಕೋಹಾಲ್ ಸೇವಿಸುತ್ತಾಳೆ ಎಂಬುದನ್ನು ನೂರಿಯಾ ತಾಯಿ ಕೆ. ಹವೇಲಿವಾಲಾ ಒಪ್ಪಿಕೊಳ್ಳುತ್ತಾರೆ. ಆದರೆ ಆಕೆ ಮಿತಿ ಮೀರಿ ಕುಡಿಯುವವಳಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ನನ್ನ ಮಗಳು ಅಮಾಯಕಿ. ಅವಳು ಯಾವುದೇ ಅಪರಾಧಿ ಮನೋಭಾವ ಹೊಂದಿದ್ದವಳಲ್ಲ. ಆಕೆ ಕುಡಿಯುತ್ತಿದ್ದುದು ಬೀರ್ ಮಾತ್ರ. ಅದೂ ಒಂದು ಬಾರಿ ಕುಡಿಯುವಾಗ ಸ್ವಲ್ಪ ಮಾತ್ರ ತೆಗೆದುಕೊಳ್ಳುತ್ತಿದ್ದಳು ಎಂದು ತಾಯಿ ಹೇಳಿದ್ದಾರೆ.

ಬ್ಯೂಟೀಷಿಯನ್ ಆಗಿರುವ 27ರ ಹರೆಯದ ನೂರಿಯಾ ನಡುರಾತ್ರಿ ತನ್ನ ಕಾರನ್ನು ಟ್ರಾಫಿಕ್ ಪೊಲೀಸರ ನಿಂತಿದ್ದ ವಾಹನಕ್ಕೆ ಮತ್ತು ಬೈಕ್ ಮತ್ತಿತರ ವಾಹನಗಳಿಗೆ ಢಿಕ್ಕಿ ಹೊಡೆಸಿದ್ದಳು. ಘಟನೆಯಿಂದ ಬೈಕ್ ಸವಾರ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದರು.

ಸಂಬಂಧಪಟ್ಟ ಸುದ್ದಿಯಿದು: ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು...?!
ಸಂಬಂಧಿತ ಮಾಹಿತಿ ಹುಡುಕಿ