ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನೇನೂ ಯಾವುದೇ ಕುಟುಂಬದ ಕಾಲು ಹಿಡಿಯಬೇಕಿಲ್ಲ: ಕಾಂಗ್ರೆಸ್‌ಗೆ ಮೋದಿ (family loyalist | Gujarat Chief Minister | Narendra Modi | Sonia Gandhi)
Bookmark and Share Feedback Print
 
PTI
ನಾನು ಕೇಂದ್ರ ಸರಕಾರದ ಗುಲಾಮನಲ್ಲ; ಯಾವುದೇ ಕುಟುಂಬ ನಿಷ್ಠರ ಕಾಲು ಹಿಡಿದು ನನಗೆ ಸಭ್ಯತೆಯ ಪ್ರಮಾಣಪತ್ರ ನೀಡಬೇಕೆಂದು ಬೇಡುವ ಅಗತ್ಯವೂ ನನಗಿಲ್ಲ ಎಂದಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಕುಟುಂಬ ರಾಜಕಾರಣವನ್ನು ಕೆದಕಿದ್ದಾರೆ.

ಪಂಚಮಹಲ್ ಜಿಲ್ಲೆಯಲ್ಲಿನ ಕದನ ತಾಲೂಕಿನಲ್ಲಿ ನಡೆದ 'ಗರೀಬ್ ಕಲ್ಯಾಣ್ ಮೇಳ'ದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ತಾನು ಬೆಲೆಯೇರಿಕೆಯ ಕುರಿತು ದನಿಯೆತ್ತಿದ್ದಕ್ಕೆ ಕಳೆದೊಂದು ವಾರದಿಂದ ತೀವ್ರ ಟೀಕೆ ಮತ್ತು ಬೆದರಿಕೆಗಳನ್ನು ಎದುರಿಸಿದ್ದೇನೆ ಎಂದರು.

ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಅರ್ಥವಾಗುವ ಭಾಷೆಯಲ್ಲಿ ಪತ್ರ ಬರೆದು ಸೋತಿದ್ದೇನೆ. ಈಗ ಇಟಾಲಿಯನ್ ಭಾಷೆಯಲ್ಲಿ ಪತ್ರ ಬರೆಯಲಿರುವುದಾಗಿ ಮೋದಿ ಕಳೆದ ವಾರ ಹೇಳಿದ್ದರು.
PTI


ಇದಕ್ಕಾಗಿ ಸಾಕಷ್ಟು ಕೆಟ್ಟ ಭಾಷೆಗಳಿಂದ ನನ್ನನ್ನು ನಿಂದಿಸಲಾಯಿತು ಮತ್ತು ಟೀಕೆ ಮಾಡಲಾಯಿತು. ಆದರೆ ಯಾವುದು ನಾಗರಿಕ ಭಾಷೆ ಮತ್ತು ಅನಾಗರಿಕ ಭಾಷೆ ಎಂಬುದು ಈ ದೇಶದ ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ಕಾಂಗ್ರೆಸ್ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ನನ್ನ ನಡತೆಯ ಬಗ್ಗೆ ಪ್ರಮಾಣ ಪತ್ರ ಪಡೆದುಕೊಳ್ಳಲು ನಾನು ಯಾವುದೇ ಕುಟುಂಬ ನಿಷ್ಠರ ಪಾದಗಳನ್ನು ಸ್ಪರ್ಶಿಸಬೇಕಾದ ಅಗತ್ಯ ನನಗಿಲ್ಲ. ಇಲ್ಲಿನ ಪರಿಸ್ಥಿತಿ ಹೇಗಿದೆಯಂದರೆ ಯಾರೊಬ್ಬರೂ 'ಪವಿತ್ರ ದನ'ದ (ಕೇಂದ್ರದ ಯುಪಿಎ ಸರಕಾರ) ಬಗ್ಗೆ ಮಾತನಾಡಕೂಡದು ಎಂಬಂತಿದೆ. ಹಾಗೊಂದು ವೇಳೆ ಬಾಯ್ತೆರೆದಲ್ಲಿ ಅದನ್ನು ಅಗೌರವ, ಅನಾಗರಿಕ ವರ್ತನೆ ಮತ್ತು ನಿಮ್ಮನ್ನು ಒಬ್ಬ ಕ್ರಿಮಿನಲ್ ವ್ಯಕ್ತಿತ್ವದವ ಎಂದು ಪರಿಗಣಿಸಲಾಗುತ್ತದೆ ಎಂದು ಮೋದಿ ಕಿಡಿ ಕಾರಿದ್ದಾರೆ.

ನಾನು ಕೇಂದ್ರ ಸರಕಾರದ ದಾಸನಲ್ಲ. ಆದರೆ ಗುಜರಾತ್ ರಾಜ್ಯದ 5.5 ಕೋಟಿ ಜನತೆಯ ಮತ್ತು ಬೆಲೆಯೇರಿಕೆ ತಡೆಯಲು ವಿಫಲವಾಗಿರುವ ಕೇಂದ್ರ ಸರಕಾರದ ಕೊಡುಗೆಯಿಂದ ಸಂಕಷ್ಟದಲ್ಲಿರುವ, ಬಡಜನತೆಯ ಸೇವಕ ನಾನು ಎಂದರು.

ಸಂಬಂಧಪಟ್ಟ ಸುದ್ದಿಯಿದು: ಮೋದಿ ಸರ್ವಾಡಳಿತ, ದಬ್ಬಾಳಿಕೆ ನಡೆಸುತ್ತಿದ್ದಾರೆ: ಕಾಂಗ್ರೆಸ್
ಸಂಬಂಧಿತ ಮಾಹಿತಿ ಹುಡುಕಿ