ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಸಲೀಲೆ ಬರೇ ಸುಳ್ಳು-ಇದು ಪಿತೂರಿ:ನಿತ್ಯಾನಂದ ಉವಾಚ (Nithyananda | Dhyanapeetam | conspiracy | Swamiji)
Bookmark and Share Feedback Print
 
ನಿತ್ಯಾನಂದ ಸ್ವಾಮಿಯ ರಾಸಲೀಲೆ ವಿಡಿಯೋ ಚಿತ್ರೀಕರಣ ನಾನೇ ಮಾಡಿದ್ದು ಎಂದು ಸ್ವಾಮಿಯ ಕಾರು ಚಾಲಕ ಲೆನಿನ್ ಕರುಪನ್ ಶನಿವಾರ ಪೊಲೀಸರಿಗೆ ಶರಣಾಗಿ ಮಾಹಿತಿ ನೀಡಿದ ಬೆನ್ನಲ್ಲೇ, ನನ್ನ ಮೇಲಿನ ಆರೋಪ ನಿರಾಧಾರ, ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ಇದರಿಂದ ನನ್ನ ಭಕ್ತರು ಆಘಾತಗೊಂಡಿದ್ದಾರೆ ಎಂದು ನಿತ್ಯಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾನೆ.

ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶ್ರಮದ ವೆಬ್‌ಸೈಟ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ನಿತ್ಯಾನಂದ, ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ. ಇದು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವಾಗಿದೆ ಎಂದು ದೂರಿದ್ದಾನೆ.

ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ರಾಸಲೀಲೆ ವಿಡಿಯೋ ತನ್ನ ವ್ಯಕ್ತಿತ್ವಕ್ಕೆ ಅಪಖ್ಯಾತಿ ತರುವಂತಹದ್ದಾಗಿದೆ ಎಂದು ವೆಬ್‌ಸೈಟ್ ಪ್ರಕಟಣೆಯಲ್ಲಿ ಹೇಳಲಾಗಿದೆ.ಗ್ರಾಫಿಕ್ಸ್ ಹಾಗೂ ಊಹಾಪೋಹಗಳನ್ನು ಪೋಣಿಸಿ ಸುದ್ದಿಯನ್ನು ಬಿತ್ತರಿಸಲಾಗಿದೆ. ಪ್ರಕರಣದ ಕುರಿತಂತೆ ನಾವು ಕಾನೂನು ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ. ಆ ಬಗ್ಗೆ ನೈಜಾಂಶವನ್ನು ಶೀಘ್ರದಲ್ಲಿ ಜನರ ಮುಂದಿಡುವುದಾಗಿ ಹೇಳಿದ್ದಾನೆ.

ನನ್ನ ಲಕ್ಷಾಂತರ ಭಕ್ತರ ಹಾಗೂ ಹಿತೈಷಿಗಳ ಮನಸ್ಸಿಗೆ ನೋವಾಗಿದೆ. ಆದರೂ ನಾನು ನಿರಪರಾಧಿಯಾಗಿದ್ದೇನೆ. ಇಂತಹ ಸಂದರ್ಭದಲ್ಲಿಯೂ ನಮ್ಮೊಂದಿಗೆ ಕೈಜೋಡಿಸಿರುವ ಭಕ್ತರಿಗೆ ಮತ್ತು ಶಿಷ್ಯರಿಗೆ ಕೃತಜ್ಞತೆ ಅರ್ಪಿಸುತ್ತೇನೆ.

ಕಳೆದ 7ವರ್ಷಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಅನೇಕ ದೇಶಗಳಲ್ಲಿ 20ಲಕ್ಷಕ್ಕೂ ಹೆಚ್ಚಿನ ಭಕ್ತರನ್ನು ಹೊಂದಿದ್ದೇನೆ. ನನ್ನ ಪ್ರವಚನದಿಂದ ಲಕ್ಷಾಂತರ ಮಂದಿ ಪ್ರಭಾವಿತರಾಗಿದ್ದಾರೆ. ನಿತ್ಯಾನಂದ ಧ್ಯಾನಪೀಠ ಜಾತಿ, ಸಂಸ್ಕೃತಿ ಹಾಗೂ ರಾಷ್ಟ್ರೀಯತೆಗಳನ್ನು ಮೀರಿ ಸರ್ವರಲ್ಲೂ ನಿಜವಾದ ಆಂತರಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಆ ಆಂದೋಲನವನ್ನು ವಿಶ್ವಾದ್ಯಂತ ಪಸರಿಸಲು ನಾವು ಬದ್ಧರಾಗಿದ್ದೇವೆ ಎಂದು ವೆಬ್‌ಸೈಟ್‌ನಲ್ಲಿ ಭರವಸೆ ನೀಡಿದ್ದಾನೆ.

ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶ್ರಮದ ವೆಬ್‌ಸೈಟ್‌ನಲ್ಲಿ ಕೇವಲ ಪ್ರಕಟಣೆ ರೀತಿ ಪ್ರತಿಕ್ರಿಯೆ ನೀಡಲಾಗಿದೆ. ಇದರಲ್ಲಿ ರಾಸಲೀಲೆ ಬಗ್ಗೆಯಾಗಲಿ, ಲೆನಿನ್ ಕರುಪ್ಪನ್ ವಿಚಾರ ಯಾವುದೂ ಪ್ರಸ್ತಾಪವಾಗಿಲ್ಲ. ಅಲ್ಲದೇ ಇದನ್ನು ಸ್ವತಃ ನಿತ್ಯಾನಂದ ಸ್ವಾಮಿಯೇ ಪ್ರಕಟಿಸಿದ್ದೋ ಅಥವಾ ಆಶ್ರಮದ ವಕ್ತಾರರೋ ಎಂದು ತಿಳಿದಿಲ್ಲ.

ವಿಡಿಯೋ ಚಿತ್ರೀಕರಣ ಮಾಡಿದ್ದು ನಾನೇ

ನಿತ್ಯಾನಂದ ಸ್ವಾಮಿ ಕಾಮಕಾಂಡ
ಸಂಬಂಧಿತ ಮಾಹಿತಿ ಹುಡುಕಿ