ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಿತ್ಯಾನಂದನ ರಾಸಲೀಲೆ ಚಿತ್ರೀಕರಣ ಮಾಡಿದ್ದು ನಾನೇ: ಲೆನಿನ್ (Swamy Nithyananda | sex scandal | ranjitha nithyananda video | Bidadi, chennai,)
ನಿತ್ಯಾನಂದನ ರಾಸಲೀಲೆ ಚಿತ್ರೀಕರಣ ಮಾಡಿದ್ದು ನಾನೇ: ಲೆನಿನ್
ಬೆಂಗಳೂರು, ಶನಿವಾರ, 6 ಮಾರ್ಚ್ 2010( 20:44 IST )
ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯ ರಾಸಲೀಲೆ ಮಾಧ್ಯಮಗಳಲ್ಲಿ ಬಯಲಾಗುತ್ತಿದ್ದಂತೆ ಅದರ ಹಿಂದೆಯೇ ಅಚ್ಚರಿಯ ಸಂಗತಿಗಳು ಹೊರಬೀಳತೊಡಗಿವೆ. ಇದೀಗ ಸ್ವಾಮೀಜಿಯ ರಾಸಲೀಲೆಯನ್ನು ತಾನೇ ಚಿತ್ರೀಕರಣ ಮಾಡಿರುವುದಾಗಿ ನಿತ್ಯಾನಂದನ ಕಾರು ಚಾಲಕ ನಿತ್ಯಾ ಧರ್ಮಾನಂದ ಅಲಿಯಾಸ್ ಲೆನಿನ್ ಕರುಪ್ಪನ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.
ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣದ ಬಗ್ಗೆ ಚೆನ್ನೈನಲ್ಲಿ ಶನಿವಾರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ ಲೆನಿನ್, ಬಿಡದಿ ಆಶ್ರಮದಲ್ಲೇ ರಾಸಲೀಲೆ ನಡೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ನಿತ್ಯಾನಂದ ಸ್ವಾಮಿ ನಡವಳಿಕೆ ಬಗ್ಗೆ ಬೇಸರವಾಗಿದ್ದು, ಅದಕ್ಕಾಗಿಯೇ ಆತನ ರಾಸಲೀಲೆಯ ಚಿತ್ರೀಕರಣ ಮಾಡಿರುವುದಾಗಿ ಸಮರ್ಥಿಕೊಂಡಿದ್ದಾರೆ. ಆತ ಸಲಿಂಗ ಕಾಮಿಯೂ ಆಗಿದ್ದಾನೆ ಎಂದು ಈ ಸಂದರ್ಭದಲ್ಲಿ ದೂರಿದ್ದಾರೆ.
ನಿತ್ಯಾನಂದನ ವಿರುದ್ಧ ಚೆನ್ನೈ ಪೊಲೀಸ್ ಕಮಿಷನರಿಗೆ ದೂರು ನೀಡಿದ್ದು, ಸೆಕ್ಷನ್ 377, 120(ಬಿ)295, 376ಅಡಿಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಚೆನ್ನೈ ಪೋಲಿಸ್ ಕಮೀಷನರಿಗೆ ಇನ್ನಷ್ಟು ಸಿಡಿಗಳನ್ನು ನೀಡಿದ್ದು, ಸ್ವಾಮಿಯ ರಾಸಲೀಲೆಯಲ್ಲಿ ಮತ್ತಷ್ಟು ಚಿತ್ರನಟಿಯರು ಶಾಮೀಲಾಗಿರುವುದಾಗಿ ವಿವರಣೆ ನೀಡಿದ್ದಾರೆ. ನಿತ್ಯಾನಂದ ಹಾಗೂ ನಟಿ ರಂಜಿತಾ ಅವರ ಪ್ರಣಯದಾಟದ ಅಸಲಿ ವಿಡಿಯೋ ಸುಮಾರು 2ಗಂಟೆ 30ನಿಮಿಷ ಕಾಲ ಇದೆ. ಅದನ್ನು ಕಳೆದ ಡಿಸೆಂಬರ್ ತಿಂಗಳಿನಿಂದಲೇ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಬಿಡದಿ ಆಶ್ರಮದಲ್ಲಿ ಕೆನಡಾ ಮೂಲದ ಭಕ್ತೆಯೊಬ್ಬರ ಕೊಲೆ ನಡೆದಿರುವುದಾಗಿ ಗಂಭೀರವಾಗಿ ಆರೋಪಿಸಿರುವ ಕರುಪ್ಪನ್, ಈ ಕೊಲೆಯಲ್ಲಿ ಸ್ವಾಮೀಜಿ ಸೇರಿದಂತೆ ಇನ್ನೂ ಮೂವರು ಶಾಮೀಲಾಗಿರುವುದಾಗಿ ದೂರಿದ್ದಾರೆ.
ಏತನ್ಮಧ್ಯೆ ನಿತ್ಯಾನಂದ ಸ್ವಾಮೀಜಿ ಪ್ರಕರಣದ ತನಿಖೆಯನ್ನು ಕರ್ನಾಟಕ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ರಾಜೇಂದ್ರನ್ ತಿಳಿಸಿದ್ದಾರೆ.