ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಕ್ಷಣ ಇಸ್ರೋ ದಾಳಿ ವರದಿ ನೀಡಿ: ಕರ್ನಾಟಕಕ್ಕೆ ಕೇಂದ್ರ (ISRO shootout | terrorist attack | P Chidambaram | Karnataka)
Bookmark and Share Feedback Print
 
ಇಸ್ರೋ ಗುಂಡಿನ ಚಕಮಕಿ ಭಯೋತ್ಪಾದಕರ ಕೃತ್ಯವಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ಈ ಸಂಬಂಧ ತಕ್ಷಣವೇ ವರದಿ ನೀಡುವಂತೆ ಕರ್ನಾಟಕ ಸರಕಾರಕ್ಕೆ ಸೂಚನೆ ನೀಡಿದ್ದಾರೆ.

ಇಂದು ಮುಂಜಾನೆ ಬೆಂಗಳೂರಿನ ಬ್ಯಾಲಾಳು ಗ್ರಾಮದಲ್ಲಿನ ಇಸ್ರೋ ಘಟಕದ ಹೊರಗಡೆ ಭದ್ರತಾ ಸಿಬ್ಬಂದಿ ಮೇಲೆ ಅಪರಿಚಿತರು ಗುಂಡಿನ ಚಕಮಕಿ ನಡೆಸಿದ ಪ್ರಕರಣದ ಬಗ್ಗೆ ಪತ್ರರರ್ತರೊಂದಿಗೆ ಮಾತನಾಡುತ್ತಾ, ಇದು ಉಗ್ರರ ಕೃತ್ಯವಲ್ಲ ಎಂದರು.

ಬೆಂಗಳೂರು ನಗರದಿಂದ 40 ಕಿಲೋ ಮೀಟರ್ ದೂರದಲ್ಲಿರುವ ಭಾರತೀಯ ಗಾಢಾಂತರಿಕ್ಷ ಜಾಲ (ಐಡಿಎಸ್ಎನ್) ಕೇಂದ್ರದ ಹೊರಗಡೆ ನಡೆದಿರುವ ಘಟನೆ ಕುರಿತು ವರದಿ ನೀಡುವಂತೆ ಕರ್ನಾಟಕ ಸರಕಾರಕ್ಕೆ ಸೂಚನೆ ನೀಡಲಾಗಿದೆ. ಘಟನೆಯಿಂದ ಇಸ್ರೋಗೆ ಯಾವುದೇ ತೊಂದರೆಯಾಗಿಲ್ಲ ಎಂದರು.

ಭದ್ರತಾ ವಿಚಾರಗಳನ್ನು ಮರುಪರಿಶೀಲನೆ ನಡೆಸುವಂತೆ ಸಿಐಎಸ್ಎಫ್‌ಗೆ ಸೂಚನೆ ನೀಡಲಾಗಿದೆ. ಇಸ್ರೋ ಅಥವಾ ಅದರ ಘಟಕಗಳಿಗೆ ಯಾವುದೇ ಅಪಾಯವಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮೇಲ್ನೋಟಕ್ಕೆ ಯಾವುದೇ ರೀತಿಯ ಭದ್ರತಾ ವೈಫಲ್ಯ ಕಂಡು ಬಂದಿಲ್ಲ ಎಂದು ಚಿದಂಬರಂ ತಿಳಿಸಿದ್ದಾರೆ.

ಮುಂಜಾನೆ 3.30ರಿಂದ 4.00 ಗಂಟೆ ನಡುವೆ ಇಸ್ರೋ ಘಟಕದ ಹೊರಗಡೆ ಬೈನಾಕ್ಯುಲರ್‌ನಲ್ಲಿ ಒಳಗಡೆಯ ದೃಶ್ಯಗಳನ್ನು ಸಂಶಯಾಸ್ಪದವಾಗಿ ವೀಕ್ಷಿಸುತ್ತಿದ್ದ ಇಬ್ಬರು ಅಪರಿಚಿತರನ್ನು ವಿಚಾರಿಸಲೆಂದು ಭದ್ರತಾ ಸಿಬ್ಬಂದಿ ಸಮೀಪ ಹೋಗುತ್ತಿದ್ದಂತೆ ಅವರು ಗುಂಡು ಹಾರಾಟ ನಡೆಸಿದ್ದರು.

ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಕೂಡ ಪ್ರತಿದಾಳಿ ನಡೆಸಿದ್ದ. ಹೆಚ್ಚಿನ ಸಿಬ್ಬಂದಿಗಳು ಬರುವುದರೊಳಗಾಗಿ ದುಷ್ಕರ್ಮಿಗಳು ಪರಾರಿಯಾಗಿದ್ದರು.

ಘಟನೆ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಹಾಗೂ ಉನ್ನತ ಮಟ್ಟದ ತನಿಖೆಗಳು ಪ್ರಗತಿಯಲ್ಲಿದೆ.

ಸಂಬಂಧಪಟ್ಟ ವರದಿಯಿದು: ಇಸ್ರೋ ಕೇಂದ್ರಕ್ಕೆ ಅಪರಿಚಿತರಿಂದ ಗುಂಡಿನ ದಾಳಿ
ಸಂಬಂಧಿತ ಮಾಹಿತಿ ಹುಡುಕಿ