ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾನಿಯಾ ಭಾರತೀಯಳಾಗಿದ್ದರೆ ಪಾಕ್‌ಗೆ ಮಿಡಿಯುತ್ತಿರಲಿಲ್ಲ: ಠಾಕ್ರೆ (Shiv Sena | Bal Thackeray | Sania Mirza | Shoaib Malik)
Bookmark and Share Feedback Print
 
ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ಅವರನ್ನು ಮದುವೆಯಾಗಲು ನಿರ್ಧರಿಸಿರುವ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನಾ ವರಿಷ್ಠ ಬಾಳ ಠಾಕ್ರೆ, ಸಾನಿಯಾ ಭಾರತೀಯ ಹೃದಯಿಯಾಗಿದ್ದಿದ್ದರೆ ಅವರಪಾಕಿಸ್ತಾನೀಯನಿಗಾಗಿ ಮಿಡಿಯುತ್ತಿರಲಿಲ್ಲ ಎಂದಿದ್ದಾರೆ.

ಇನ್ನು ಮುಂದೆ ಸಾನಿಯಾ ಭಾರತೀಯಳಾಗಿ ಉಳಿಯುವುದಿಲ್ಲ. ಆಕೆಯ ಹೃದಯದಲ್ಲಿ ಭಾರತೀಯತೆ ಇರುತ್ತಿದ್ದರೆ, ಅದು ಪಾಕಿಸ್ತಾನೀಯನಿಗಾಗಿ ಮಿಡಿಯುತ್ತಿರಲಿಲ್ಲ. ಸಾನಿಯಾ ಭಾರತಕ್ಕಾಗಿ ಆಡಲು ಬಯಸಿರುವುದಾದರೆ ಆಕೆ ಭಾರತೀಯ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ಬರೆದಿರುವ ಸಂಪಾದಕೀಯದಲ್ಲಿ 84ರ ಹರೆಯದ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

ಶೋಯಿಬ್ ಜತೆಗಿನ ಮದುವೆಯ ನಂತರ ಸಾನಿಯಾ ಪಾಕಿಸ್ತಾನಿ ಪ್ರಜೆಯಾಗುತ್ತಾರೆ. ಆಕೆ ಪಾಕಿಸ್ತಾನದ ಪೌರತ್ವವನ್ನು ಪಡೆದುಕೊಂಡು ಭಾರತದ ಪರವಾಗಿ ಹೇಗೆ ಆಡಲು ಸಾಧ್ಯ? ತನಗೆ ಇಷ್ಟ ಬಂದಂತೆ ಆಡಲು ಭಾರತ ಎನ್ನುವುದು ಟೆನಿಸ್ ಚೆಂಡೇ ಎಂದು ಸಾಮ್ನಾದಲ್ಲಿ ಪ್ರಶ್ನಿಸಲಾಗಿದೆ.

ಮುಸ್ಲಿಂ ಧಾರ್ಮಿಕ ಮುಖಂಡರ ಕೆಂಗಣ್ಣಿಗೆ ತುತ್ತಾಗಿದ್ದ ವಿಚಾರಗಳ ಪ್ರಸ್ತಾಪ ನಡೆಸಿರುವ ಠಾಕ್ರೆ, ಟೆನಿಸ್ ಅಂಗಣದಲ್ಲಿ ಆಟದಲ್ಲಿ ಜಯಗಳಿಸುವುದಕ್ಕಿಂತ ಹೆಚ್ಚಾಗಿ ಆಕೆ ಬಿಗಿ ಉಡುಪುಗಳು, ಫ್ಯಾಷನ್ ಮತ್ತು ಪ್ರೇಮ ಪ್ರಕರಣಗಳಿಂದಲೇ ಜನಪ್ರಿಯರಾದರು; ಆಟಕ್ಕಿಂತ ಹೆಚ್ಚಾಗಿ ಆಕೆ ತನ್ನ ವಿಲಕ್ಷಣ ಮೋಡಿಯ ಮೂಲಕ ಜನರ ಗಮನವನ್ನು ಸೆಳೆದರು ಎಂದು ಬರೆದುಕೊಂಡಿದ್ದಾರೆ.

ಶೋಯಿಬ್‌ಗೆ ಕೇವಲ ಕ್ರೀಡಾ ಕ್ಷೇತ್ರದಲ್ಲಷ್ಟೇ ಭಾರತವು ವೈರಿ ರಾಷ್ಟ್ರವಲ್ಲ, ಜತೆಗೆ ಯುದ್ಧ ಭೂಮಿಯಲ್ಲೂ ಎದುರಾಳಿ ಎಂದು ಆರೋಪಿಸಿರುವ ಶಿವಸೇನಾ ವರಿಷ್ಠ, ಶೋಯಿಬ್ ಭಾರತದಲ್ಲೇ ಹಲವು ಸಂಬಂಧಗಳನ್ನು ಹೊಂದಿದ್ದಾರೆ, ಹಲವು ಹುಡುಗಿಯನ್ನು ತಾನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಎಂಬುದನ್ನು ಕೇಳಿ ತಿಳಿದಿದ್ದೇವೆ ಎಂದು ಚುಚ್ಚು ಮಾತುಗಳನ್ನಾಡಿದ್ದಾರೆ.

ಅಲ್ಲದೆ ಸಾನಿಯಾ ಕುಟುಂಬ ಪಾಕಿಸ್ತಾನಿ ವಿಸಾಕ್ಕೆ ಅರ್ಜಿ ಸಲ್ಲಿಸಿದ ತಕ್ಷಣವೇ ವಿಸಾ ಪಡೆದುಕೊಂಡಿರುವುದಕ್ಕೂ ಠಾಕ್ರೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಲತಾ ಮಂಗೇಶ್ಕರ್ ಅವರಂತಹ ಗಾಯಕಿಗೆ ಅಷ್ಟು ಸುಲಭದಲ್ಲಿ ಪಾಕಿಸ್ತಾನಿ ವಿಸಾ ಸಿಗುವುದಿಲ್ಲ. ಆದರೆ ಸಾನಿಯಾ ಕುಟುಂಬಕ್ಕೆ ತಕ್ಷಣವೇ ಯಾವುದೇ ವಿಳಂಬವಿಲ್ಲದೆ ದೊರೆತಿದೆ ಎಂದು ಅವರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಸಂಬಂಧಪಟ್ಟ ಸುದ್ದಿಯಿದು:
ಸಾನಿಯಾಳನ್ನು ಶೋಯಿಬ್‌ಗೆ ಪರಿಚಯಿಸಿದ್ದೇ ನಾನು: ಆಯೇಶಾ
ಸಂಬಂಧಿತ ಮಾಹಿತಿ ಹುಡುಕಿ