ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೋಮುಗಲಭೆಗಳಿಗೆ ಬಿಜೆಪಿಯೇ ಯಾಕೆ ಹೊಣೆ?: ಗಡ್ಕರಿ ಪ್ರಶ್ನೆ (Nitin Gadkari | Congress | anti-Sikh riots | BJP)
Bookmark and Share Feedback Print
 
ಕೋಮುಗಲಭೆಗಳು ಅಥವಾ ಹಿಂಸಾಚಾರಗಳು ನಡೆದಾಗ ಬಿಜೆಪಿ ಸರಕಾರಗಳನ್ನೇ ಯಾಕೆ ದೂಷಿಸಲಾಗುತ್ತದೆ ಎಂದು ಪ್ರಶ್ನಿಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಕೋಮು ದಳ್ಳುರಿ ಸಂಭವಿಸಿದಾಗ ಅಲ್ಲಿನ ಮುಖ್ಯಮಂತ್ರಿಗಳನ್ನು ಯಾಕೆ ಹೊಣೆಗಾರರನ್ನಾಗಿಸುವುದಿಲ್ಲ, ಈ ಇಬ್ಬಗೆಯ ನೀತಿ ಯಾಕೆ ಎಂದು ಟೀಕಾಕಾರರಿಗೆ ಸವಾಲೆಸೆದಿದ್ದಾರೆ.

'ಬಿಬಿಸಿ ಹಿಂದಿ' ಜತೆ ಮಾನಾಡುತ್ತಿದ್ದ ಗಡ್ಕರಿ, ಯಾವುದೇ ಸರಕಾರವನ್ನು ಅಥವಾ ಮುಖ್ಯಮಂತ್ರಿಯನ್ನು ಆ ರಾಜ್ಯದಲ್ಲಿ ನಡೆಯುವ ಹಿಂಸಾಚಾರಗಳಿಗೆ ಜವಾಬ್ದಾರನನ್ನಾಗಿಸುವುದು ಸರಿಯಾದ ಮಾರ್ಗವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೋದಿಯ ವಿರುದ್ಧ ತನಿಖೆಯೇಕೆ?
ಗುಜರಾತ್ ಗಲಭೆಗಿಂತಲೂ ಹೆಚ್ಚಿನ ಹಿಂಸಾಚಾರಗಳು 1992ರಲ್ಲಿ ಮುಂಬೈಯಲ್ಲಿ ನಡೆದಿತ್ತು. ಆಗ ಯಾಕೆ ರಾಜ್ಯ ಸರಕಾರವನ್ನು ದೂಷಿಸಿರಲಿಲ್ಲ? ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ವಿಶೇಷ ತನಿಖಾ ತಂಡ ಯಾಕೆ ತನಿಖೆ ನಡೆಸಲಿಲ್ಲ ಎಂದು ಗಡ್ಕರಿ ಪ್ರಶ್ನಿಸಿದ್ದಾರೆ.

ಗುಜರಾತ್ ಗಲಭೆ ದುರದೃಷ್ಟಕರ. ಆದರೆ ಇಂತಹ ಗಲಭೆಗಳು ಇತರ ರಾಜ್ಯಗಳಲ್ಲಿ ನಡೆದಾಗ ಅಲ್ಲಿನ ಸರಕಾರ ಮತ್ತು ಮುಖ್ಯಮಂತ್ರಿಗಳನ್ನು ಯಾಕೆ ಹೊಣೆಗಾರರನ್ನಾಗಿ ಮಾಡಿಲ್ಲ ಎನ್ನುವುದು ನಮ್ಮ ಪ್ರಶ್ನೆ ಎಂದು ಅವರು ತಿಳಿಸಿದ್ದಾರೆ.

ಗುಜರಾತ್ ಗಲಭೆ ಕುರಿತಂತೆ ಬಿಜೆಪಿ ಸರಕಾರವಿದೆ ಎಂಬ ಏಕೈಕ ಕಾರಣಕ್ಕೆ ಉದ್ದೇಶ ಪೂರ್ವಕವಾಗಿ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಗುರಿ ಮಾಡಲಾಗುತ್ತಿದೆ. ಇದೇ ರೀತಿ ಕಾಂಗ್ರೆಸ್ ನೇತೃತ್ವದ ಸರಕಾರಗಳಿದ್ದಾಗ ಯಾಕೆ ಅಲ್ಲಿನ ಮುಖ್ಯಮಂತ್ರಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತಿಲ್ಲ. ಇದು ಮಾಧ್ಯಮದ ಒಂದು ವರ್ಗ ಮತ್ತು ಕೆಲವು ವ್ಯಕ್ತಿಗಳಿಂದ ನಡೆಯುತ್ತಿರುವ ಕುತಂತ್ರದ ಭಾಗವಷ್ಟೇ ಎಂದು ನುಡಿದರು.

ಕಲಾಂರನ್ನು ರಾಷ್ಟ್ರಪತಿ ಮಾಡಿದ್ದು ನಾವು..
ಬಿಜೆಪಿ ಮುಸ್ಲಿಂ ವಿರೋಧಿ ಎಂದು ಹೇಳುವುದಾದರೆ, ಡಾ. ಅಬ್ದುಲ್ ಕಲಾಂ ಅವರನ್ನು ಈ ರಾಷ್ಟ್ರಪತಿಯನ್ನಾಗಿ ನೇಮಿಸಲು ನಾವು ಮುಂದಾಗುತ್ತಿರಲಿಲ್ಲ. ಖಂಡಿತಾ ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ಹಾಗೆಂದು ಬಿಂಬಿಸುವ ಯತ್ನ ಕೆಲವು ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳಿಂದ ನಡೆಯುತ್ತಿದೆ ಎಂದರು.

ಸಿಖ್ ವಿರೋಧಿ ಗಲಭೆಗೆ ಕಾಂಗ್ರೆಸ್ಸೇ ಕಾರಣವಲ್ಲ
1984ರ ಸಿಖ್ ವಿರೋಧಿ ಗಲಭೆಯನ್ನು ಕಾಂಗ್ರೆಸ್ ಆರಂಭಿಸಿತ್ತು ಎಂದು ಹೇಳುವುದು ಸರಿಯಲ್ಲ. ಕೆಲವು ವ್ಯಕ್ತಿಗಳು ಇಂತಹ ಹಿಂಸಾಚಾರಗಳಲ್ಲಿ ಪಾಲ್ಗೊಂಡಿರಬಹುದು. ಆದರೆ ಸರಕಾರವೇ ಈ ಹಿಂಸಾಚಾರಕ್ಕೆ ಚಾಲನೆ ನೀಡಿತ್ತು ಎಂದು ಹೇಳುವುದು ಸಂಪೂರ್ಣವಾಗಿ ಸರಿಯಾಗದು.

ಇಂತಹ ಘಟನೆಗಳನ್ನು ಯಾರಾದರೂ ಸಂಘಟಿಸುತ್ತಾರೆ ಅಥವಾ ಕೈವಾಡ ನಡೆಸಲಾಗುತ್ತದೆ ಎನ್ನಲಾಗದು. ಇವೆಲ್ಲ ಬೃಹತ್ ಸಂಖ್ಯೆಯಲ್ಲಿ ಸೇರಿದ ಆಕ್ರೋಶಿತ ಜನತೆಯ ಆಕಸ್ಮಿಕ ಪ್ರತಿಕ್ರಿಯೆಗಳು. ಹಾಗಾಗಿ ಅಲ್ಲಿನ ಮುಖ್ಯಮಂತ್ರಿ ಅಥವಾ ಸರಕಾರವನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಸಿಖ್ ವಿರೋಧಿ ಗಲಭೆಗೆ ಕಾಂಗ್ರೆಸ್ಸೇ ಕಾರಣವಲ್ಲ ಎಂದರು.

ಸಂಬಂಧಪಟ್ಟ ಸುದ್ದಿಯಿದು: ಛೇ...ಬಿಜೆಪಿ ಮುಸ್ಲಿಮ್ ವಿರೋಧಿಯಲ್ಲ: ಗಡ್ಕರಿ ಉವಾಚ
ಸಂಬಂಧಿತ ಮಾಹಿತಿ ಹುಡುಕಿ