ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇರಳ ಪೊಲೀಸ್ ಅಧಿಕಾರಿಗೆ ಭಯೋತ್ಪಾದಕರ ಸಂಬಂಧ! (Kerala IPS officer | terror links | V S Achuthanandan | Tomin J Thachankary)
Bookmark and Share Feedback Print
 
ಕೇರಳದ ಕೆಲವು ಸಂಘಟನೆಗಳಿಗೆ ಐಎಸ್ಐ ಸಂಬಂಧವಿದೆ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ ಬೆನ್ನಿಗೆ ಬಹಿರಂಗಗೊಂಡ ಆಘಾತಕಾರಿ ವಿಚಾರವಿದು. ಸ್ವತಃ ಕೇರಳದ ಐಪಿಎಸ್ ಅಧಿಕಾರಿಯೊಬ್ಬರು ಇತ್ತೀಚೆಗಷ್ಟೇ ಕತಾರ್‌ನಲ್ಲಿ ಉಗ್ರರ ಜತೆ ಸಂಬಂಧ ಹೊಂದಿದ್ದ ಕೆಲವು ವ್ಯಕ್ತಿಗಳ ಜತೆ ಸಭೆ ನಡೆಸಿದ್ದಾರೆ, ಈ ಕುರಿತು ತನಿಖೆ ನಡೆಸಿ ಎಂದು ಕೇಂದ್ರ ಆದೇಶ ನೀಡುವುದರೊಂದಿಗೆ ಪ್ರಕರಣ ಹೊರ ಬಂದಿದೆ.

ತೊಮಿನ್ ಜೆ ಥಾಚಂಕೇರಿ ಎಂಬಾತನೇ ಈ ಪೊಲೀಸ್ ಅಧಿಕಾರಿ. ಈತ ಭಯೋತ್ಪಾದಕರ ಜತೆ ಸಂಬಂಧ ಹೊಂದಿದ್ದ ಕೇರಳದ ಕೆಲವು ವ್ಯಕ್ತಿಗಳನ್ನು ಕತಾರ್‌ನಲ್ಲಿ ಭೇಟಿ ಮಾಡಿ, ಅವರನ್ನು ಕೇರಳಕ್ಕೆ ಮರಳುವುದಾದರೆ ತಾನು ಸಹಾಯ ಮಾಡಲು ಸಿದ್ಧ ಎಂಬ ಭರವಸೆ ನೀಡಿದ್ದ.

ಈ ಕುರಿತು ರಾಜ್ಯ ಸರಕಾರಕ್ಕೆ ಪತ್ರ ಬರೆದಿರುವ ಕೇಂದ್ರ ಗೃಹ ಸಚಿವಾಲಯವು, ತನಿಖೆ ನಡೆಸುವಂತೆ ಆದೇಶ ನೀಡಿದೆ. ಆದರೆ ಈ ಕುರಿತು ವಿಸ್ತ್ರತ ಮಾಹಿತಿ ನೀಡಲು ಮುಖ್ಯಮಂತ್ರಿ ವಿ.ಎಸ್. ಅಚ್ಯುತ್ತಾನಂದನ್ ನಿರಾಕರಿಸಿದ್ದಾರೆ.

ಕೇಂದ್ರದಿಂದ ಬರುವ ಪತ್ರದ ಕುರಿತು ಮುಖ್ಯ ಕಾರ್ಯದರ್ಶಿಯವರು ಕ್ರಮ ಕೈಗೊಳ್ಳುತ್ತಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ನಾನು ಬಯಸುವುದಿಲ್ಲ. ಇದಕ್ಕೆ ಸಂಬಂಧಪಟ್ಟವರನ್ನು ಸರಕಾರವು ವಿಚಾರಣೆ ನಡೆಸುತ್ತದೆ ಎಂದಷ್ಟೇ ಅವರು ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯವು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿದ್ದ ಮಾಹಿತಿಯನ್ನು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ, ಕೇರಳ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರದ ಮುಖಾಂತರ ತಿಳಿಸಿದ್ದರು ಎಂದು ವರದಿಗಳು ಹೇಳಿವೆ.

ಅನುಮತಿಯಿಲ್ಲದೆ ವಿದೇಶಕ್ಕೆ...
ಕಣ್ಣೂರು ಪೊಲೀಸ್ ಆಯುಕ್ತನಾಗಿದ್ದ ಥಾಚಂಕೇರಿ ಸರಕಾರಿ ನಿಯಮದಂತೆ ಸರಕಾರದ ಅನುಮತಿಯಿಲ್ಲದೆ ವಿದೇಶ ಪ್ರವಾಸ ಮಾಡಿದ್ದ. ಇದೇ ಕಾರಣಕ್ಕಾಗಿ ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಈ ಐಜಿಪಿ ಇದೇ ಮೊದಲ ಬಾರಿ ವಿವಾದಿತ ವಿಚಾರಗಳಲ್ಲಿ ಸಿಕ್ಕಿ ಬೀಳುತ್ತಿರುವುದಲ್ಲ. ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದ.

ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಪ್ರಕರಣ ಸಂಬಂಧ ಈತನ ವಿರುದ್ಧ ಈ ಹಿಂದೆ ಕೇಸು ದಾಖಲಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಸರಕಾರದ ಅನುಮತಿಯಿಲ್ಲದೆ ಆಗಾಗ ವಿದೇಶ ಪ್ರವಾಸ ಮಾಡುತ್ತಿರುವುದು ಕೂಡ ಈತನ ಮೇಲೆ ಕಣ್ಣಿಡುವಂತೆ ಮಾಡಿತ್ತು.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣದಲ್ಲಿ ಥಾಚಂಕೇರಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸುಮಾರು 90 ಲಕ್ಷ ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದಾನೆ ಎಂಬ ಆಪಾದನೆಯಿದೆ. ಈ ಸಂಬಂಧ 2007ರಲ್ಲಿ ಸೇವೆಯಿಂದ ಅಮಾನತುಗೊಂಡಿದ್ದ.

ನಕಲಿ ಸಿಡಿ ಪ್ರಕರಣದಲ್ಲೂ ಈತನ ಕೈವಾಡವಿರುವುದು ಬಹಿರಂಗವಾಗಿತ್ತು. ಅಧಿಕಾರಿಯ ಪತ್ನಿ ನಡೆಸುತ್ತಿದ್ದ ಡಿಜಿಟಲ್ ಸ್ಟುಡಿಯೋವೊಂದರ ಮೇಲೆ ನಡೆಸಿದ ದಾಳಿ ವೇಳೆ ಅಪಾರ ಪ್ರಮಾಣದ ನಕಲಿ ಸಿಡಿಗಳು ಪತ್ತೆಯಾಗಿದ್ದವು.

ಸಂಬಂಧಪಟ್ಟ ಸುದ್ದಿಯಿದು:
** ಕೇರಳದ ಕೆಲವು ಸಂಘಟನೆಗಳಿಗೆ ಐಎಸ್ಐ ಸಂಬಂಧ: ಸಚಿವ
ಸಂಬಂಧಿತ ಮಾಹಿತಿ ಹುಡುಕಿ