ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊನೆಗೂ ಲೋಕಸಭೆಗೆ ಹಾಜರಾದ ಸೋನಿಯಾ ಗಾಂಧಿ! (Lok Sabha | Congress | Sonia Gandhi | Paola Maino)
Bookmark and Share Feedback Print
 
ಸಂಸತ್ ಅಧಿವೇಶನ ಆರಂಭವಾಗಿ ಎರಡು ವಾರಗಳ ನಂತರ ಕೊನೆಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಲೋಕಸಭೆಗೆ ಆಗಮಿಸಿದ್ದು, ಕಲಾಪದಲ್ಲಿ ಭಾಗವಹಿಸಿದ್ದಾರೆ.

ಜುಲೈ 26ರಂದು ಲೋಕಸಭೆ ಮತ್ತು ರಾಜ್ಯಸಭೆಯ ಮುಂಗಾರಿನ ಅಧಿವೇಶನ ಆರಂಭಗೊಂಡಿತ್ತಾದರೂ ಇದುವರೆಗೆ ಸೋನಿಯಾ ಕಲಾಪದಿಂದ ದೂರವೇ ಉಳಿದಿದ್ದರು. ತನ್ನ ತಾಯಿ ಪಾವ್ಲಾ ಮೈನೋ ಅಸ್ವಸ್ಥರಾಗಿದ್ದ ಕಾರಣ ಅವರನ್ನು ಉಪಚರಿಸಲು ಸೋನಿಯಾ ಅಮೆರಿಕಾಕ್ಕೆ ತೆರಳಿದ್ದರು.

ಇದನ್ನೂ ಓದಿ: ಸೋನಿಯಾ, ರಾಹುಲ್ ಕಾಣೆಯಾಗಿರುವ ಹಿಂದಿನ ಕಾರಣ?

ಭಾರತಕ್ಕೆ ಮರಳಿರುವ ಅವರು ಇಂದು ಕಲಾಪ ಆರಂಭವಾಗುವ ಮೊದಲೇ ಸದನಕ್ಕೆ ಆಗಮಿಸುತ್ತಿದ್ದಂತೆ ಸಂಸದೀಯ ಪಟುಗಳು, ಅದರಲ್ಲೂ ಕಾಂಗ್ರೆಸ್ ಪಕ್ಷದ ಸದಸ್ಯರು ಸ್ವಾಗತಿಸಿದರು. ಬಳಿಕ ಅವರು ವಿತ್ತ ಸಚಿವ ಹಾಗೂ ಸದನದ ನಾಯಕ ಪ್ರಣಬ್ ಮುಖರ್ಜಿಯವರ ಸಮೀಪದಲ್ಲಿ ಆಸೀನರಾದರು.

ಸೋನಿಯಾ ದೇಶದಲ್ಲಿರದ ಕಾರಣ ಸಂಸತ್ತಿನ ಹಲವು ಚರ್ಚೆಗಳಿಗೆ ಸಮಸ್ಯೆಯಾಗಿತ್ತು. ಜಾತಿಯಾಧರಿತ ಜನಗಣತಿ, ಬೆಲೆಯೇರಿಕೆ ಕುರಿತು ವಿವಾದ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಸರಕಾರದ ಪ್ರಮುಖ ಸೂತ್ರದಾರಿ ಎಂದೇ ಗುರುತಿಸಲ್ಪಡುವ ಸೋನಿಯಾರವರ ಅಭಿಪ್ರಾಯಗಳಿಲ್ಲದೆ ಆಡಳಿತ ಪಕ್ಷವು ಅತಂತ್ರ ಪರಿಸ್ಥಿತಿ ಎದುರಿಸಿತ್ತು.

ಸೋನಿಯಾ (ಎಡ್ವಿಜ್ ಅಂಟೋನಿಯಾ ಅಲ್ಬಿನಾ ಮೈನೋ) ತಾಯಿ ಪಾಲ್ವಾ ಮೈನೋ (85) ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಟಲಿಯ ಟುರಿನ್‌ನ ಒರ್ಬಾಸನೋ ಎಂಬಲ್ಲಿ ಅವರು ಕುಟುಂಬದ ಮನೆಯಲ್ಲಿ ಈ ಹಿಂದೆ ಉಳಿದುಕೊಂಡಿದ್ದರಾದರೂ, ಸುದೀರ್ಘಾವಧಿಯಿಂದ ದೆಹಲಿಯಲ್ಲೇ ಇದ್ದರು. ಇತ್ತೀಚೆಗಷ್ಟೇ ಅವರನ್ನು ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಕಳುಹಿಸಲಾಗಿತ್ತು.

ಸಂಸತ್ ಅಧಿವೇಶನ ಆರಂಭವಾಗುವ ಮೊದಲೇ ಆಡಳಿತ ಮೈತ್ರಿಕೂಟದ ಅಧ್ಯಕ್ಷೆಯಾಗಿರುವ ಸೋನಿಯಾರವರು, ಪುತ್ರ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರ ಜತೆ ತಾಯಿಯನ್ನು ನೋಡಲು ಅಮೆರಿಕಾಕ್ಕೆ ತೆರಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ