ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಲ್ಪಸಂಖ್ಯಾತರು ಪ್ರಧಾನಿಯ ಅಳಿಯಂದಿರೇ?: ಸುದರ್ಶನ್ (RSS | KS Sudarshan | Congress | Muslims)
Bookmark and Share Feedback Print
 
ಅಲ್ಪಸಂಖ್ಯಾತರನ್ನು ಹೊಗಳಿ ಅಟ್ಟಕ್ಕೇರಿಸಿದ್ದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಆರೆಸ್ಸೆಸ್ ಮುಖಂಡ ಕೆ.ಎಸ್. ಸುದರ್ಶನ್, ಅವರು ನಿಮ್ಮ ಅಳಿಯಂದಿರೇ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರ ಹಾದಿಯನ್ನೇ ತುಳಿದಿದ್ದಾರೆ.

ಇದನ್ನೂ ಓದಿ: ಅಫ್ಜಲ್ ಗುರು ಕಾಂಗ್ರೆಸ್ಸಿಗರ ಮನೆ ಅಳಿಯನೇ?: ಬಿಜೆಪಿ

2006ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಲ್ಪಸಂಖ್ಯಾತರ ಕುರಿತು ಅನಪೇಕ್ಷಿತ ಹೇಳಿಕೆ ನೀಡಿದ್ದರು. ಈ ದೇಶದ ಸಂಪನ್ಮೂಲದ ಮೇಲೆ ಅಲ್ಪಸಂಖ್ಯಾತರಿಗೆ, ಅದರಲ್ಲೂ ಮುಸ್ಲಿಮರಿಗೇ ಮೊದಲ ಹಕ್ಕು. ಹಾಗಾದಲ್ಲಿ ಅಭಿವೃದ್ಧಿ ಕಾರ್ಯಗಳು ಸಮಾನಾಂತರವಾಗಿ ಸಾಗಬಹುದು ಎಂದು ಸಿಂಗ್ ಹೇಳಿದ್ದರು.

ಅಲ್ಪಸಂಖ್ಯಾತರ, ಅದರಲ್ಲೂ ಮುಸ್ಲಿಮರ ಅಭಿವೃದ್ಧಿಗಾಗಿ ಹಾಕಿಕೊಂಡ ಯೋಜನೆಗಳ ಕುರಿತು ನಡೆದ 52ನೇ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ಪ್ರಧಾನಿಯವರು ನೀಡಿದ್ದ ವಿವಾದಿತ ಹೇಳಿಕೆಯನ್ನು ಕೆದಕಿರುವ ಆರೆಸ್ಸೆಸ್ ಮಾಜಿ ಅಧ್ಯಕ್ಷ ಸುದರ್ಶನ್, ಅಲ್ಪಸಂಖ್ಯಾತ ಸಮುದಾಯವರು ಪ್ರಧಾನಿಯವರ ಅಳಿಯಂದಿರೇ ಎಂದು ಪ್ರಶ್ನಿಸಿದರು.

ಬಿಜೆಪಿ ಮಾಜಿ ಅಧ್ಯಕ್ಷ ಮುರಳಿ ಮನೋಹರ ಜೋಷಿಯವರ ಉಪಸ್ಥಿತಿಯಲ್ಲಿ ಧರ್ಮಪಾಲ್ ಸೌಧ ಪೀಠ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಗೋಷ್ಠಿಯೊಂದನ್ನು ಉದ್ದೇಶಿಸಿ ಸುದರ್ಶನ್ ಮಾತನಾಡುತ್ತಿದ್ದರು.

ಮಾತು ಮುಂದುವರಿಸಿದ ಆರೆಸ್ಸೆಸ್ ಮುಖಂಡ, ಈ ದೇಶದ ಎಲ್ಲಾ ಜನರಿಗೆ ಸಂಪನ್ಮೂಲಗಳ ಮೇಲೆ ಸಮಾನ ಹಕ್ಕಿಲ್ಲವೇ? ಪ್ರಧಾನ ಮಂತ್ರಿ ಇಂತಹ ಹೇಳಿಕೆಯನ್ನು ನೀಡುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.

ಸುದರ್ಶನ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಜೆ.ಪಿ. ಧನೋಪಿಯಾ, ಆರೆಸ್ಸೆಸ್-ಬಿಜೆಪಿ ನಾಯಕತ್ವವು ಮಾನಸಿಕವಾಗಿ ದಿವಾಳಿಯಾಗಿದೆ ಎಂದಿದ್ದಾರೆ.

ಸಂಸತ್ ದಾಳಿ ರೂವಾರಿ ಮೊಹಮ್ಮದ್ ಅಫ್ಜಲ್ ಗುರುವನ್ನು ನೇಣಿಗೆ ಹಾಕುವಲ್ಲಿ ಹತ್ತುಹಲವು ಕಾರಣಗಳನ್ನು ನೀಡುತ್ತಾ ದಿನ ಎಣಿಸುತ್ತಿರುವ ಕಾಂಗ್ರೆಸ್ಸಿಗರಿಗೆ ಈ ಭಯೋತ್ಪಾದಕ ಅಳಿಯನೇ ಎಂದು ಇತ್ತೀಚೆಗಷ್ಟೇ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರು ಪ್ರಶ್ನಿಸಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ