ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಳೆದ ವರ್ಷ ಪತ್ತೆಯಾದ ಕಪ್ಪು ಹಣ 786 ಕೋಟಿ ರೂ.! (Black money | Rajya Sabha | S.S. Palanimanickam | India)
Bookmark and Share Feedback Print
 
ನಮ್ಮ ದೇಶದಲ್ಲಿ ಎಷ್ಟು ಕಪ್ಪು ಹಣ ಇದೆ ಎನ್ನುವುದರ ಬಗ್ಗೆ ಯಾವುದೇ ಅಧಿಕೃತ ಅಂದಾಜು ಲಭ್ಯವಿಲ್ಲವಾದರೂ, ಸರಕಾರ ಕಳೆದ ಆರ್ಥಿಕ ವರ್ಷದಲ್ಲಿ ವಶಪಡಿಸಿಕೊಂಡಿರುವ ಕಪ್ಪು ಹಣದ ಮೊತ್ತವನ್ನು ಬಹಿರಂಗಪಡಿಸಿದೆ. 2009-10ರ ಆರ್ಥಿಕ ವರ್ಷದಲ್ಲಿ 786 ಕೋಟಿ ರೂಪಾಯಿ ಕಪ್ಪು ಹಣ ಪತ್ತೆಯಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ನಿಮ್ಮ ಸಾಲದ ಮೊತ್ತ 10 ಸಾವಿರ ರೂಪಾಯಿ ಗೊತ್ತಾ?

2009-10ರಲ್ಲಿ 786.27 ಕೋಟಿ ರೂಪಾಯಿಗಳನ್ನು ಆದಾಯ ತೆರಿಗೆ ಇಲಾಖೆಯು ವಶಪಡಿಸಿಕೊಂಡಿದೆ. 2008-09ರಲ್ಲಿ 550.23 ಕೋಟಿ ಹಾಗೂ 2007-08ರಲ್ಲಿ 427.82 ಕೋಟಿ ರೂಪಾಯಿ ವಾರಸುದಾರರಿಲ್ಲದ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ವಿತ್ತ ಸಚಿವಾಲಯದ ರಾಜ್ಯ ಸಚಿವ ಎಸ್.ಎಸ್. ಫಳನಿ ಮಾಣಿಕಂ ವಿವರಣೆ ನೀಡಿದ್ದಾರೆ.

ಅಂದರೆ ಕಳೆದ ಮೂರು ವರ್ಷಗಳಲ್ಲಿ ರಿಯಲ್ ಎಸ್ಟೇಟ್, ಉತ್ಪಾದನಾ ಮತ್ತು ಗಣಿಗಾರಿಕಾ ವಲಯಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸರಕಾರ ವಶಪಡಿಸಿಕೊಂಡಿರುವ ಒಟ್ಟು ಕಪ್ಪು ಹಣ 1,764 ಕೋಟಿ ರೂಪಾಯಿಗಳು.

ಪ್ರತಿವರ್ಷ ನೂರಾರು ಕೋಟಿ ರೂಪಾಯಿ ಕಪ್ಪು ಹಣ ಪತ್ತೆಯಾಗುತ್ತಿದ್ದರೂ, ದೇಶದಲ್ಲಿ ಒಟ್ಟು ಎಷ್ಟು ಕಪ್ಪು ಹಣವಿದೆ ಎಂಬುದರ ಕುರಿತು ಸ್ಪಷ್ಟ ಅಂದಾಜಿಲ್ಲ. ಆದರೂ 1983-84ರಲ್ಲಿ ನಡೆಸಲಾದ ಅಧ್ಯಯನವೊಂದರ ಪ್ರಕಾರ 31,584 ಕೋಟಿಯಿಂದ 36,786 ಕೋಟಿ ರೂಪಾಯಿವರೆಗೆ ಕಪ್ಪು ಹಣವಿರಬಹುದು ಎಂದು ಊಹಿಸಲಾಗಿತ್ತು.

ಈ ಸಮೀಕ್ಷೆ ನಡೆದು 25 ವರ್ಷಗಳೇ ಕಳೆದು ಹೋಗಿವೆ. ಕಳೆದ ಒಂದು ದಶಕದಲ್ಲಿ ಭಾರತ ಅಪಾರ ಕೈಗಾರಿಕಾ ಪ್ರಗತಿ ಕಂಡಿದೆ. ಹಾಗಾಗಿ ಸಾಕಷ್ಟು ಅಕ್ರಮಗಳು ನಡೆದಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ದೇಶದಲ್ಲಿರುವ ಒಟ್ಟು ಕಪ್ಪು ಹಣದ ಬಗ್ಗೆ ಪ್ರಸಕ್ತ ಯಾವುದೇ ಮಾಹಿತಿಗಳಿಲ್ಲ. ಈ ಕುರಿತು ಯಾವುದೇ ಸಮೀಕ್ಷೆಯನ್ನು ನಡೆಸಲಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ